'ಚಲೋ ಬೆಳ್ತಂಗಡಿ'ಗೆ ಕ್ಷಣಗಣನೆ: ವಿವಿಧೆಡೆಗಳಿಂದ ಜಾಥಾಗಳ ಆಗಮನ

Update: 2023-08-28 10:35 IST
ಚಲೋ ಬೆಳ್ತಂಗಡಿಗೆ ಕ್ಷಣಗಣನೆ: ವಿವಿಧೆಡೆಗಳಿಂದ ಜಾಥಾಗಳ ಆಗಮನ
  • whatsapp icon

ಬೆಳ್ತಂಗಡಿ, ಆ.28: ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣದ ತನಿಖೆಯನ್ನು ಎಸ್.ಐ.ಟಿ.ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ಚಲೋ ಬೆಳ್ತಂಗಡಿ ಮಹಾಧರಣಿಗೆ ರಾಜ್ಯದ ವಿವಿಧ ಭಾಗಗಳಿಂದ ಜನರು ಹರಿದು ಬರುತ್ತಿದ್ದಾರೆ.

ಜನಪರ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಹಾಗೂ ಪ್ರಗತಿ ಪರ ಸಂಘಟನೆಗಳ ಹೋರಾಟ ಸಮಿತಿ ಕರ್ನಾಟಕ ಇದರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನಪರ ಸಂಘಟನೆಗಳು ಒಟ್ಟಾಗಿ ಮಹಾಧರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬೆಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಹೊರಟಿರುವ ಜಾಥಾಗಳು ಒಂದೊಂದಾಗಿ ಬಂದು ಬೆಳ್ತಂಗಡಿಯ ಮಹಾಧರಣಿಯ ವೇದಿಕೆಯನ್ನು ಸೇರಿಕೊಳ್ಳುತ್ತಿವೆ.

ಹನ್ನೊಂದು ಗಂಟೆಗೆ ಮಹಾಧರಣಿಯ ಅಧಿಕೃತ ಉದ್ಘಾಟನೆ ನಡೆಯಲಿದೆ.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News