ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Update: 2024-09-04 12:32 GMT

ಮಂಗಳೂರು, ಸೆ.4: ದ.ಕ. ಜಿಲ್ಲಾ ಮಟ್ಟದ 21 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಜಿಲ್ಲಾ ಶಿಕ್ಷಣ ಇಲಾಖೆಯು ಪ್ರಕಟಿಸಿದೆ.

*ಕಿರಿಯ ಪ್ರಾಥಮಿಕ ವಿಭಾಗ: ಬಂಟ್ವಾಳ ವಲಯದ ಕಂಚಿನಡ್ಕ ಸರಕಾರಿ ಶಾಲೆಯ ಫ್ರಾನ್ಸಿಸ್ ಡೇಸ, ಬೆಳ್ತಂಗಡಿ ವಲಯದ ಹುಣ್ಸಕಟ್ಟೆ ಸರಕಾರಿ ಶಾಲೆಯ ಕರಿಯಪ್ಪ ಎ.ಕೆ, ಮಂಗಳೂರು ದಕ್ಷಿಣ ವಲಯದ ಒಡ್ಡೂರು ಶಾಲೆಯ ರೋಸಾ ರಜನಿ ಡಿಸೋಜ, ಮಂಗಳೂರು ಉತ್ತರ ವಲಯದ ಬೊಕ್ಕಪಟ್ನ ಶಾಲೆಯ ಡ್ರಿಸಿಲ್ ಲಿಲ್ಲಿ ಮಿನಿಜಸ್, ಮೂಡುಬಿದಿರೆ ವಲಯದ ಮೂಡುಕೊಣಾಜೆ ಶಾಲೆಯ ಐಡಾ ಪೀರೇರಾ, ಪುತ್ತೂರು ವಲಯದ ಕೈಕಾರ ಶಾಲೆಯ ರಾಮಣ್ಣ ರೈ, ಸುಳ್ಯ ತಾಲೂಕಿನ ದೊಡ್ಡೇರಿ ಶಾಲೆಯ ಕೃಷ್ಣಾನಂತ ಸರಳಾಯ ಎಂ.

*ಹಿರಿಯ ಪ್ರಾಥಮಿಕ ವಿಭಾಗದ: ಬಂಟ್ವಾಳ ವಲಯದ ಕೆಲಿಂಜ ಶಾಲೆಯ ಬಿ.ತಿಮ್ಮಪ್ಪ ನಾಯ್ಕ, ಬೆಳ್ತಂಗಡಿ ವಲಯದ ಸವಣಾಲು ಶಾಲೆಯ ಮಂಜುನಾಥ ಜಿ., ಮಂಗಳೂರು ಉತ್ತರ ವಲಯದ ಪಂಜಿಮೊಗರು ಶಾಲೆಯ ವಾಣಿ, ಮಂಗಳೂರು ದಕ್ಷಿಣ ವಲಯದ ಬೋಳಾರ ಶಾಲೆಯ ಸುಜಾತಾ, ಮೂಡುಬಿದಿರೆ ವಲಯದ ಕೋಟೆಬಾಗಿಲು ಶಾಲೆಯ ಮೇಬಲ್ ಫೆನಾರ್ಂಡಿಸ್. ಪುತ್ತೂರು ವಲಯದ ಬೆಳ್ಳಿಪ್ಪಾಡಿಯ ಯಶೋದಾ ಎನ್.ಎಂ., ಸುಳ್ಯ ವಲಯದ ಕೆಪಿಎಸ್ ಗಾಂಧಿನಗರ ಶಾಲೆಯ ಪದ್ಮನಾಭ ಎ.

*ಪ್ರೌಢ ಶಾಲೆ ವಿಭಾಗ: ಬಂಟ್ವಾಳ ವಲಯದ ನಂದಾವರ ಶಾಲೆಯ ಶ್ರೀಕಾಂತ ಎಂ., ಬೆಳ್ತಂಗಡಿ ವಲಯದ ನಡ ಶಾಲೆಯ ಮೋಹನ ಬಾಬು ಡಿ., ಮಂಗಳೂರು ಉತ್ತರ ವಲಯದ ಬಡಗ ಎಕ್ಕಾರು ಶಾಲೆಯ ವಿದ್ಯಾಲತಾ, ಮಂಗಳೂರು ದಕ್ಷಿಣ ವಲಯದ ಎಡಪದವು ಸ್ವಾಮಿ ವಿವೇಕಾನಂದ ಪಪೂ ವಿದ್ಯಾಲಯದ ಸುಬ್ರಹ್ಮಣ್ಯ ಮೊಗೆರಾಯ, ಮೂಡುಬಿದಿರೆ ವಲಯದ ಅಳಿಯೂರು ಶಾಲೆಯ ವಿದ್ಯಾ ಸಂದೀಪ ನಾಯಕ, ಪುತ್ತೂರು ವಲಯದ ರೇಬಂಡಾಡಿ ಶಾಲೆಯ ಲಲಿತಾ, ಸುಳ್ಯ ವಲಯದ ಸುಬ್ರಹ್ಮಣ್ಯ ಶಾಲೆಯ ರಘು ಅವರನ್ನು ಆಯ್ಕೆ ಮಾಡಲಾಗಿದೆ.

ದ.ಕ.ಜಿಲ್ಲಾ ಮಟ್ಟದ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಸೆ.5ರಂದು ಬೆಳಗ್ಗೆ 9ಕ್ಕೆ ಬಂಟ್ವಾಳ ಬಂಟರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News