ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ‘ಜಾಯಿಂಟ್ ರಿಪ್ಲೇಸ್ ಮೆಂಟ್ ರೋಬೋಟಿಕ್ ಯುನಿಟ್’

Update: 2023-08-15 10:57 GMT

ಮಂಗಳೂರು, ಆ.15: ಬೆಂಗಳೂರು ನಗರ ಹೊರತುಪಡಿಸಿದರೆ ರಾಜ್ಯದಲ್ಲೇ ಮೊದಲ ಜಾಯಿಂಟ್ ರಿಪ್ಲೇಸ್ ಮೆಂಟ್ ರೋಬೋಟಿಕ್ ಯುನಿಟ್ ಮಂಗಳೂರಿನ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಯಾರಂಭಗೊಂಡಿದೆ.

ನಗರದ ತಾಜ್ ವಿವೆಂಟಾ ಹೋಟೆಲ್ ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನೂತನ ಘಟಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಹೊಸ ಸೌಲಭ್ಯಗಳನ್ನು ಪರಿಚಯಿಸಿದ್ದಕ್ಕಾಗಿ ತಾನು ಅಭಿನಂದಿಸುತ್ತೇನೆ. ವೈದ್ಯರು ತಮ್ಮ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಇದು ಉಪಯುಕ್ತವಾಗಿದೆ ಎಂದರು.

ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ಮಂಡಳಿಯ ಚೇರ್ಮನ್ ಡಾ.ಯೆನೆಪೋಯ ಅಬ್ದುಲ್ಲ ಕುಂಞಿ ಪ್ರ್ರಾಸ್ತಾವಿಕವಾಗಿ ಮಾತನಾಡಿ ದ.ಕ. ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯದಲ್ಲಿ ಮುಂಚೂಣಿಯಲ್ಲಿದೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ‘ಜಾಯಿಂಟ್ ರಿಪ್ಲೇಸ್ ಮೆಂಟ್ ರೋಬೇಟಿಕ್ ಚಾಲನೆ ನೀಡಿರುವುದು ನಮಗೆ ಗೌರವ ತಂದಿದೆ ಎಂದರು.

ಮೂಳೆಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ದೀಪಕ್ ರೈ ಮಾತನಾಡಿ, ಇದು ಮಂಗಳೂರಿನ ಮೊದಲ ರೋಬೋಟಿಕ್ ಘಟಕವಾಗಿದ್ದು, ಎಐ ತಂತ್ರಜ್ಞಾನದೊಂದಿಗೆ ಸಂಪೂರ್ಣ ಸ್ವಯಂಚಾಲಿತವಾಗಿದೆ ಎಂದರು. ಮೆರಿಲ್ನ ಕಾರ್ಯನಿರ್ವಾಹಕ ಸುವೊದೀಪ್ ತಾಂತ್ರಿಕ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸನ್ಮಾನಿಸಲಾಯಿತು.

ವ್ಯವಸ್ಥಾಪಕ ನಿರ್ದೇಶಕ ಯೆನೆಪೋಯ ಮಹಮ್ಮದ್ ಕುಂಞಿ ,ನಿರ್ದೇಶಕರಾದ ಮೊಹಮ್ಮದ್ ಫರ್ಹಾದ್, ಜಾವೇದ್,ಮಾಜಿ ಸಚಿವ ಬಿ.ರಮಾನಾಥ ರೈ, ಡಾ.ಹಬೀಬ್ ರಹ್ಮಾನ್ ಉಪಸ್ಥಿತರಿದ್ದರು.

 

 

 

 ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮೊಹಮ್ಮದ್ ತಾಹೀರ್ ಸ್ವಾಗತಿಸಿದರು, ಡಾ.ಧನುಷ್ ಶೆಟ್ಟಿ ವಂದಿಸಿದರು. ಹೈಫಾ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News