ಮಂಗಳೂರು | ಎರಡು ಕಳ್ಳತನ: ಚಡ್ಡಿ ಗ್ಯಾಂಗ್ ಕೃತ್ಯದ ಶಂಕೆ

Update: 2024-07-09 05:34 GMT

ಮಂಗಳೂರು, ಜು.9: ನಗರದಲ್ಲಿ ಮಂಗಳವಾರ ಮುಂಜಾವ ಎರಡು ಕಡೆ ಕಳ್ಳತನ ನಡೆದಿದ್ದು, ಇದು ಉತ್ತರ ಭಾರತ ಮೂಲದ ಚಡ್ಡಿ ಗ್ಯಾಂಗ್ ನ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.

ನಗರದ ಉರ್ವಸ್ಟೋರ್ ಸಮೀಪದ ಕೋಟೆಕಣಿ ಒಂದನೇ ಕ್ರಾಸ್ ನ ಮನೆಯೊಂದರಿಂದ ಮಂಗಳವಾರ ಮುಂಜಾವ ಕಳವು ನಡೆದಿದೆ. ಕಿಟಕಿ ಮುರಿದು ಒಳನುಗ್ಗಿರುವ ಕಳ್ಳರು ಇಬ್ಬರಿಗೆ ಹಲ್ಲೆಗೈದು ಚಿನ್ನಾಭರಣ ದೋಚಿದ್ದಾರೆ. ಅಲ್ಲದೆ, ಕಾರನ್ನೂ ಕಳವುಗೈದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ನಗರದ ಪಂಪ್ ವೆಲ್ ಬಳಿ ಬಿ.ಎಚ್. ಸ್ಟೋರ್ ಗೆ ರಾತ್ರಿ ನುಗ್ಗಿದ ಕಳ್ಳರು ನಗದು ಕಳವುಗೈದಿದ್ದಾರೆ ಎನ್ನಲಾಗಿದೆ. ಎರಡೂ ಕಡೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News