ಮಂಗಳೂರು: KSA ಆಶ್ರಯದಲ್ಲಿ ಜುಲೈ 16ಕ್ಕೆ ಬ್ಯಾರಿ ಕುಟುಂಬ ಸಂಗಮ

Update: 2023-07-15 09:20 GMT

ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಜುಲೈ 16 ರವಿವಾರ ಸಂಜೆ ಘಂಟೆ 4ರಿಂದ ರಾತ್ರಿ 9ರ ತನಕ ಮಂಗಳೂರಿನ ಕಂಕನಾಡಿ ಜಮೀಯತುಲ್ ಫಲಾಹ್ ಹಾಲ್ನಲ್ಲಿ ಬ್ಯಾರಿ ಕುಟುಂಬ ಸಂಗಮ ಜರುಗಲಿದೆ.

ಕಾರ್ಯಕ್ರಮದಲ್ಲಿ ಇಜಾಝ್ ಸ್ವಲಾಹಿ, ಉಮರ್ ಅಹ್ಮದ್ ಮದನಿ, ನಝೀರ್ ಸಲಫಿ, ಹೈದರ್ ಉಳ್ಳಾಲ್, ಯಾಸಿರ್ ಅಲ್ ಹಿಕಮಿ, ಅಮಿನ್ ಅಲ್ ಹಿಕಮಿ, ಶಾಕಿರ್ ಉಳ್ಳಾಲ್, ಅಬೂ ಮುಜಾಹಿದ್ ಶಮೀರ್, ಅಬ್ದುನ್ನಾಸಿರ್ ಕುಂಜತ್ತೂರು ಮುಂತಾದವರು ಬ್ಯಾರಿ ಭಾಷೆಯಲ್ಲಿ ವಿಷಯ ಮಂಡಿಸಲಿದ್ದಾರೆ.

ಮಹಿಳೆಯರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸರ್ವರನ್ನೂ ಈ ಕುಟುಂಬ ಸಂಗಮಕ್ಕೆ ಸಂಘಟನೆ ಸ್ವಾಗತಿಸುತ್ತಿದೆ ಎಂದು ಕೆ.ಎಸ್.ಎ. ಅಧ್ಯಕ್ಷ ಫಿರೋಝ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News