ಶಿವಮೊಗ್ಗ ಘಟನೆಯಲ್ಲಿ ಮತಾಂಧ ಶಕ್ತಿಗಳ ಕೈವಾಡ: ನಳಿನ್ ಕುಮಾರ್ ಕಟೀಲು ಆರೋಪ

Update: 2023-10-02 06:27 GMT

ಮಂಗಳೂರು, ಅ.2: ಶಿವಮೊಗ್ಗದಲ್ಲಿ ಮೀಲಾದುನ್ನಬಿ ಮೆರವಣಿಗೆಯ ಸಂದರ್ಭ ನಡೆದ ಘಟನೆ ಗಮನಿಸಿದರೆ ಮತಾಂಧ ಶಕ್ತಿಗಳ ಕೈವಾಡ ಕಂಡು ಬರುತ್ತಿದೆ. ಮೀಲಾದ್ ಮೆರವಣಿಗೆ ಹೆಸರಿನಲ್ಲಿ ಹಿಂದೂ ಧರ್ಮೀಯರ ಅಂಗಡಿಗಳ ಲೂಟಿ, ಮನೆಗಳಿಗೆ ದಾಳಿ ನಡೆದಿದ್ದು, ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ನ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದ್ದು, ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಆ ಸಂದರ್ಭ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದಿರುವ ಕಾರಣ ಮತಾಂಧ ಶಕ್ತಿಗಳು ಮತ್ತೆ ತಮ್ಮ ಎದ್ದು ನಿಂತಿವೆ ಎಂದು ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಭಯೋತ್ಪಾದನೆಯ ಚಟುವಟಿಕೆಗಳು ಕಾಣುತ್ತಿವೆ. ಹರ್ಷ ಹತ್ಯೆ, ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಎನ್ ಐಎ ದಾಳಿ ವೇಳೆ ಅತಿ ಹೆಚ್ಚು ಆತಂಕ ಕಂಡುಬಂದಿರುವುದು ತೀರ್ಥ ಹಳ್ಳಿಯಲ್ಲಿ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂದರ್ಭದಲ್ಲೂ ತೀರ್ಥಹಳ್ಳಿಯಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭ ಆಗಿದೆ ಎಂಬುದು ತನಿಖೆಯಿಂದ ತಿಳಿದಿದೆ. ಭಟ್ಕಳ ಬ್ರದರ್ಸ್ ಹೆಸರಿನಲ್ಲಿ ಭಟ್ಕಳದಲ್ಲಿ ಭಯೋತ್ಪದನಾ ಚಟುವಟಿಕೆ ಆರಂಭವಾಯಿತು. ತೀರ್ಥಹಳ್ಳಿ ಬ್ರದರ್ಸ್ ಹೆಸರಿನಲ್ಲಿ ಮತಾಂಧ ಶಕ್ತಿಗಳು ಭಯೋತ್ಪಾದನಾ ಚಚುವಟಿಕೆಗಳನ್ನು ಪ್ರಾರಂಭಿಸಿರುವುದು ಎನ್ ಐಎ ತನಿಖೆಯಿಂದ ಸ್ಪಷ್ಟವಾಗಿರುವುವುದು ಮಾಧ್ಯಮದಲ್ಲಿ ಕಂಡಿರುವುದಾಗಿ ಅವರು ಹೇಳಿದರು.

ಶಿವಮೊಗ್ಗ ಸೂಕ್ಷ್ಮ ಜಿಲ್ಲೆಯಾಗಿದ್ದು, ಇಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸರಕಾರ ಮುನ್ನಚಚ್ಚರಿಕೆ ವಹಿಸಬೇಕಾಗಿತ್ತು. ಸರಕಾರ ಕಠಿಣ ಕ್ರಮ ವಹಿಸದಿರುವ ಕಾರಣ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಈ ರೀತಿಯ ಘಟನೆಗಳು ಮರುಕಳಿಸದ ರೀತಿಯಲ್ಲಿ ತನಿಖೆ ಮಾಡಬೇಕು. ಈ ಘಟನೆಯಲ್ಲಿ ಯಾರು ಭಾಗಿಯಾಗಿದ್ದಾರೋ ಅಂತಹವರನ್ನು ಬಂಧಿಸಬೇಕು. ಘಟನೆಗಳಲ್ಲಿ ಆತಂಕವಾದ, ಭಯೋತ್ಪದನಾ ಚಟುವಟಿಕೆಗಳಿವೆಯೇ ಎಂದು ಕಂಡು ಹಿಡಿಯಬೇಕು ಎಂದು ನಳಿನ್ ಒತ್ತಾಯಿಸಿದರು.

ರಾಜ್ಯದಲ್ಲಿ ಗೃಹ ಸಚಿವರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಮತ ಬೇಟೆಗಾಗಿ ಇಂತಹ ಭಯೋತ್ಪದನಾ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಫಲರಾಗಿದ್ದಾರೆ. ಹಿಂದೆ ಪ್ರವೀಣ್ ನೆಟ್ಟಾರು, ಹರ್ಷ ಹತ್ಯೆ ಎನ್ ಐಎ ತನಿಖೆ ಮೂಲಕ ಕಠಿಣ ಕ್ರಮ ವಹಿಸಲಾಗಿತ್ತು. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಾಟೆ ಸಂದರ್ಭದಲ್ಲಿ ಬಿಜೆಪಿ ಸರಕಾರ ಕಠಿಣ ಕ್ರಮ ವಹಿಸಿದ್ದ ಕಾರಣ ಇಂತಹ ಆತಂಕವಾದ ಹತೋಟಿಗೆ ಬಂದಿತ್ತು ಎಂದವರು ಹೇಳಿದರು.

'ಇಂಡಿಯಾ(I.N.D.I.A.)' ಮೈತ್ರಿ ಕೂಟವನ್ನು ನಿಷೇಧಿಸಬೇಕು ಎಂದು ಪೇಜಾವರ ಶ್ರೀ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್, ಈಗಾಗಲೇ ಘಟಕದಲ್ಲಿ ಸನಾತನ ಧರ್ಮವನ್ನು ಕೀಳಾಗಿ ಮಾತನಾಡುತ್ತಿದ್ದಾರೆ. ಇದು ಬಾಕಿ ಉಳಿದ ಮತ ಧರ್ಮಗಳವರು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಲು ಶಕ್ತಿ ಕೊಟ್ಟಂತಾಗಿದೆ. ಇಂಡಿಯಾ ಕೂಟ ಹಾಗೂ ಕರ್ನಾಟಕ ಕಾಂಗ್ರೆಸ್ ಸರಕಾರವೂ ಹಾಗೆ ಇದು ಕೇವಲ ಹಿಂದೂ ಸಮಾಜದ ವಿರೋಧಿಯಾಗಿದೆ ಎಂದು ನಳಿನ್ ಹೇಳಿದರು.

Full View
Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News