ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ಗೆ ಸ್ಟೆಮ್ ಪುರಸ್ಕಾರ

Update: 2024-09-26 15:31 GMT

ಮಂಗಳೂರು: ನಗರದ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ ಪ್ರತಿಭಾನ್ವೇಷಣಾ ಸ್ಪರ್ಧೆಯಲ್ಲಿ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಸ್ಟೆಮ್ ಪುರಸ್ಕಾರಕ್ಕೆ ಪಾತ್ರವಾಗಿದೆ.

ಆರರಿಂದ ಹತ್ತನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ತಂಡವು ಬೆಸ್ಟ್ ಸ್ಕೂಲ್ ಪುರಸ್ಕಾರವನ್ನು ಗಳಿಸಿದೆ. ಏಳು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು ಈ ಸಾಲಿನ (ವಿಜ್ಞಾನ, ತಂತ್ರಜ್ಞಾನ, ಅಭಿಯಂತರ, ಗಣಿತ) ಸ್ಟೆಮ್ ಪ್ರಶಸ್ತಿಗೆ ಭಾಜನರಾದರು.

ಪ್ರಾಂಶುಪಾಲ ವ.ಧರ್ಮಗುರು ಜಾನ್ಸನ್ ಎಲ್. ಸಿಕ್ವೇರಾ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News