ಪಾವಂಜೆ: ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ 'ಯಕ್ಷಗಾನ ತಾಳಮದ್ದಳೆ ಸಪ್ತಕ' ಉದ್ಘಾಟನೆ

Update: 2023-07-20 11:46 GMT

ಪಾವಂಜೆ: ನಾಗವೃಜ ಕ್ಷೇತ್ರ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಶ್ರೀಯುತ ಪ.ರಾ.ಶಾಸ್ತ್ರಿಗಳು ಭಾಗವತ ಬಲಿಪ ಶಿವಶಂಕರ ಭಟ್ಟರಿಗೆ ವೀಳ್ಯವನ್ನು ಕೊಡುವ ಮೂಲಕ 'ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಉಜಿರೆ - ರಜತ ಪರ್ವ ಸರಣಿ' ಸಂಧಾನ ಸಪ್ತಕ - ಯಕ್ಷಗಾನ ತಾಳಮದ್ದಳೆ ಸಪ್ತಕವನ್ನು ಬುಧವಾರ ಉದ್ಘಾಟಿಸಲಾಯಿತು. 

ಕಾರ್ಯಕ್ರಮದಲ್ಲಿ ಬಹುಶ್ರುತ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿಯವರು, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ರಿ.ಉಜಿರೆ ಇದರ ರಜತಪರ್ವ ಸರಣಿಯ ಅಭಿಯಾನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಶುಭ ಹಾರೈಸಿದರು.

ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್ ಕಲಾವಿದರನ್ನು ಗೌರವಿಸಿದರು.

ಜು. 25ರ ವರೆಗೆ ಪಾವಂಜೆಯ ಶಾರಧ್ವತ ಯಜ್ಞಾಂಗಣದಲ್ಲಿ ಪ್ರತಿ ದಿನ ಸಂಜೆ 4.45ರಿಂದ 7.45ರ ವರೆಗೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಜು.19ರಂದು ಸುಗ್ರೀವ -ಕೌಶಿಕ, 20ಕ್ಕೆ ಅಂಗದ -ಪ್ರಹಸ್ತ, 21ರಂದು ಹನೂಮಂತ- ವೀರಮಣಿ, 22ರಂದು ಸುಗ್ರೀವ -ಹನೂಮಂತ, 23ರಂದು ಸುಭದ್ರೆ- ಅರ್ಜುನ, 24ರಂದು ಕೃಷ್ಣ-ದುರ್ಯೋಧನ, 25ರಂದು ಷಣ್ಮುಖ- ಕೌಂಹಾಸುರ ಪ್ರಸಂಗಗಳೂ ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News