ಪುತ್ತೂರು ವಿವಿಧ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರೂ. 1.70 ಕೋಟಿ ಬಿಡುಗಡೆ

Update: 2023-10-24 07:24 GMT

Photo: facebook.com/Ashokkumarrai

ಪುತ್ತೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ ಸರ್ಕಾರ ರೂ. 1.70 ಕೋಟಿ ಬಿಡುಗಡೆ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕಡಂದೇಲು ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ ರೂ 24.00 ಲಕ್ಷ , ಕೆದಿಲ ಗ್ರಾಮದ ಭಗವಂತಕೋಡಿ ಮುರುರ ಪಾಟ್ರುಕೋಡಿ ರೂ 17.00 ಲಕ್ಷ , ಕೊಳ್ಳಿಗೆ ಗ್ರಾಮದ ಪರ್ಲಂಪಾಡಿ ಕಣಿಯಾರು ಪ.ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣ 8.00 ಲಕ್ಷ , ಕೊಳ್ತಿಗೆ ಗ್ರಾಮದ ಬೈಲೋಡಿ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ 6.00, ಕೆದಂಬಾಡಿ ಗ್ರಾಮದ ನಿಡ್ಯಾಣ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ 10 ಲಕ್ಷ ,ಬಲ್ನಾಡು ಗ್ರಾಮದ ಸಾರ್ಯ ಕೋಡಿಯಡ್ಕ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ 10 ಲಕ್ಷ , ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ರಸ್ತೆ ರೂ 15.00, ಬಂಟ್ವಾಳ ತಾಲೂಕು ಬಿಳಿಯಾರು ಗ್ರಾಮದ ಪೆಜಿಕುಡೆಗುಂಡಿ ರಸ್ತೆಗೆ ರೂ 10 ಲಕ್ಷ , ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದ ರಸ್ತೆಗೆ 15 ಲಕ್ಷ , ಪುತ್ತೂರು ತಾಲೂಕು 34-ನೆಕ್ಕಿಲಾಡಿ ದರ್ಬೆ ಕಟ್ಟೆಯ ಬಳಿ ಇರುವ ರಸ್ತೆ ಕಾಂಕ್ರೀಟಿಕರಣ ರೂ 5 ಲಕ್ಷ , ಕೊಡಿಂಬಾಡಿ ಗ್ರಾಮದ ಕಲ್ಪನೆ-ಪಿಲಿಗುಂಡ ರಸ್ತೆಗೆ ರೂ 10 ಲಕ್ಷ, ಕೋಡಿಂಬಾಡಿ ಗ್ರಾಮದ ದಾರಂದ ಕುಕ್ಕು -ಬದಿನಾರು ರಸ್ತೆಗೆ ರೂ 10 ಲಕ್ಷ , ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪಾಡಿ ಗ್ರಾಮದ ಕಠಾರ ಕೊಡಿಮಾರ ರಸ್ತೆ ರೂ 10 ಲಕ್ಷ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಪಾಲೆದ ಕೋಡಿ ಕೂಡ್ಲೆ ರಸ್ತೆ ಗೆ 10 ಲಕ್ಷ ಹಾಗೂ ಕೊಡಿಂಬಾಡಿ ಗ್ರಾಮದ-ಕಜೆ-ಬೆಳ್ಳಿಪ್ಪಾಡಿ ರಸ್ತೆಗೆ 10 ಲಕ್ಷ ರೂ ಅನುದಾನವನ್ನು ಬಿಡುಗಡೆಮಾಡಲಾಗಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News