ಮಂಗಳೂರು: ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ಕಳವು; ಪತಿಯ ವಿರುದ್ಧ ದೂರು ನೀಡಿದ ಪತ್ನಿ

Update: 2023-08-09 08:59 GMT

ಮಂಗಳೂರು: ಕಪಾಟಿನಲ್ಲಿರಿಸಿದ್ದ ಚಿನ್ನಾಭರಣವನ್ನು ಪತಿಯೇ ಕಳವುಗೈದ ಬಗ್ಗೆ ಆತನ ಪತ್ನಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

ರೆನಿಶಾ ನೊರೊನ್ಹಾ ದೂರು ನೀಡಿದ ಮಹಿಳೆ. ಆಕೆಯ ಪತಿ ಮೊಹಮ್ಮದ್ ಇಲಿಯಾಸ್ ಆರೋಪಿ. ಆತನಿಗೆ ಸಹಕರಿಸಿದ ವ್ಯಕ್ತಿಯ ವಿರುದ್ಧವೂ ದೂರು ದಾಖಲಾಗಿದೆ.

ದೂರಿನ ವಿವರ: ತಾನು ಪತಿ ಮೊಹಮ್ಮದ್ ಇಲಿಯಾಸ್ ಮತ್ತು ಮಗನೊಂದಿಗೆ ಮಂಗಳೂರು ಕೆಪಿಟಿ ವ್ಯಾಸನಗರದ ಫ್ಲಾಟ್ನಲ್ಲಿ ವಾಸವಿದ್ದೆವು. ಮದುವೆ ಸಮಯದಲ್ಲಿ ತಾಯಿ ಮನೆಯವರು ನೀಡಿದ 25 ಪವನ್, ತಾನು ದುಡಿದು ಮಾಡಿದ 5 ಪವನ್, ತಾಯಿ ಮನೆಯವರು ಉಡುಗೊರೆಯಾಗಿ ನೀಡಿದ 20 ಪವನ್ , ಮದುವೆ ಸಮಯದಲ್ಲಿ ಪತಿಯ ಮನೆಯವರು ಉಡುಗೊರೆಯಾಗಿ ನೀಡಿದ 25 ಪವನ್ ಸೇರಿದಂತೆ ಒಟ್ಟು 75 ಪವನ್ ಚಿನ್ನವನ್ನು ಲಾಕರ್ನಲ್ಲಿಟ್ಟಿದ್ದೆ. ಇದು ತನಗೆ ಮತ್ತು ಪತಿ ಇಲಿಯಾಸ್ನಿಗೆ ಮಾತ್ರ ತಿಳಿದಿತ್ತು ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಎಪ್ರಿಲ್ನಲ್ಲಿ ಪತಿ ಮತ್ತು ತನಗೆ ಜಗಳವಾಗಿ ತಾಯಿ ಮನೆಯಲ್ಲಿ ವಾಸವಿದ್ದೆ. ವಾರಕ್ಕೊಮ್ಮೆ ಫ್ಲಾಟ್ಗೆ ಬಂದು ಹೋಗುತ್ತಿದ್ದೆ. ಸುಮಾರು ಒಂದು ತಿಂಗಳ ನಂತರ ಫ್ಲಾಟ್ಗೆ ಹೋಗಿ ವಾಚ್ಮೆನ್ ಬಳಿ ವಿಚಾರಿಸಿದಾಗ ಪತಿ ಫ್ಲಾಟ್ಗೆ ಬಾರದೆ ಒಂದು ವಾರವಾಗಿದೆ ಎಂದು ತಿಳಿಸಿದ್ದರು.

ಇದರಿಂದ ಅನುಮಾನಗೊಂಡು ಬಂಗಾರ ಇಟ್ಟ ಲಾಕರ್ನಲ್ಲಿ ನೋಡಿದಾಗ ಚಿನ್ನ ಇರಲಿಲ್ಲ. ಪತಿಗೆ ಪದೇ ಪದೇ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಮೂರು ದಿನಗಳ ಅನಂತರ ಕರೆ ಸ್ವೀಕರಿಸಿ ‘ನಾನು ಲಾಕರ್ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗಿದ್ದೇನೆ. ನಿನಗೆ ಏನು ಮಾಡಲಾಗುತ್ತದೆ ಅದನ್ನು ಮಾಡು’ ಎಂದರು . ಅಲ್ಲದೆ ಚಿನ್ನವನ್ನು ಬ್ಯಾಂಕಿನಲ್ಲಿ ಸುಮಾರು 28.5 ಲಕ್ಷಕ್ಕೆ ಅಡವಿಟ್ಟು ಹಣ ಪಡೆದುಕೊಂಡಿರುವುದಾಗಿ ಹಾಗೂ ಅದಕ್ಕೆ ಬಡ್ಡಿ ಕಟ್ಟಲು ಆಗದೇ ಪ್ರಭಾಕರ್ ಎಂಬವರಿಗೆ 3 ತಿಂಗಳ ಮಟ್ಟಿಗೆ ಬಡ್ಡಿಯನ್ನು ಕಟ್ಟಲು ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ. ಅಡವಿಟ್ಟ ಚಿನ್ನದಲ್ಲಿ ಪ್ರಭಾಕರನು ಮೂರು ತಿಂಗಳಾಗುವ ಮೊದಲು ಸುಮಾರು 12 ಲಕ್ಷದಷ್ಟು ಚಿನ್ನವನ್ನು ಬಿಡಿಸಿ ಕರಗಿಸಿ ಮಾರಾಟ ಮಾಡಿರುವುದಾಗಿ ಪತಿ ಹೇಳಿರುವುದಾಗಿ ರೆನಿಶಾ ನೊರೊನ್ಹಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇಲಿಯಾಸ್ ಮತ್ತು ಪ್ರಭಾಕರನ ಮೇಲೆ ಸೂಕ್ತ ಕ್ರಮ ಜರಗಿಸಿ ಚಿನ್ನವನ್ನು ವಾಪಸಸ್ ಕೊಡಿಸುವಂತೆ ರೆನಿಶಾ ನೊರೊನ್ಹಾ ಅವರು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News