ಇನ್ನೂ 3-4 ದಿನ ವ್ಯಾಪಕ ಮಳೆ ಸಾಧ್ಯತೆ

Update: 2023-07-04 11:29 IST
Editor : Haneef | Byline : Saleeth Sufiyan
ಇನ್ನೂ 3-4 ದಿನ ವ್ಯಾಪಕ ಮಳೆ ಸಾಧ್ಯತೆ
  • whatsapp icon

ಮಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3-4 ದಿನಗಳಲ್ಲಿ ವ್ಯಾಪಕ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ಹಿನ್ನಲೆಯಲ್ಲಿ ಮಂಗಳೂರು, ಮೂಲ್ಕಿ, ಉಳ್ಳಾಲ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ ರಜೆ ಘೋಷಿಸಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ( ಇಂದು ಬೆಳಗ್ಗೆ 8:30ರ ತನಕ) ಜಿಲ್ಲೆಯ ಹಲವಡೆ ಸುರಿದ ಮಳೆಯ ವಿವರ ಇಂತಿವೆ.

ಪಜೀರು 172.5 ಮಿ.ಮೀ., ಮುನ್ನೂರು 155.ಮಿ.ಮೀ., ಕೋಟೆಕಾರ್ 154 ಮಿ.ಮೀ., ಕಿನ್ಯ 135 ಮಿ.ಮೀ., ಪಾಂಡೇಶ್ವರ 132.5. ಮಿ.ಮೀ., ಬಾಳ 122 ಮಿ.ಮೀ., ಚೇಳ್ಯಾರು 118 ಮಿ.ಮೀ., ಮೂಡುಶೆಡ್ಡೆ 112 ಮಿ.ಮೀ. ಮಳೆ ಸುರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - Saleeth Sufiyan

contributor

Similar News