ಚೇರ್ಕಾಡಿ ದೊಡ್ಡಮನೆ ಶಿವರಾಂ ಶೆಟ್ಟಿ
Update: 2024-05-15 16:24 GMT
ಉಡುಪಿ, ಮೇ15: ಕೊಡವೂರು ನಿವಾಸಿ, ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ. ಶೆಟ್ಟಿ ಅವರು ಹೃದಯಾಘಾತದಿಂದ ಇಂದು ಸಂಜೆ ನಿಧನ ಹೊಂದಿದರು.
ಊರಿನ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಇವರು ಚೇರ್ಕಾಡಿ ದೊಡ್ಡಮನೆ ಸಂಪ್ರದಾಯಬದ್ದ ಕಂಬಳ ಆಯೋಜನೆಯ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು.
ಪತ್ನಿ, ಪುತ್ರಿ ಹಾಗೂ ಅಪಾರ ಸಂಖ್ಯೆಯ ಕುಟುಂಬಸ್ಥರನ್ನು ಅಗಲಿದ್ದಾರೆ.