ಅಬೂಬಕ್ಕರ್ ಸಿದ್ದೀಕ್

Update: 2024-05-21 17:33 GMT

ಮಂಗಳೂರು, ಮೇ 21 : ಪಡುಬಿದ್ರಿ ಸಮೀಪದ ಪಲಿಮಾರು ಕೋಟೆ ಕುಟುಂಬದ ಅಬೂಬಕ್ಕರ್ ಸಿದ್ದೀಕ್ (65) ಅವರು ಮಂಗಳವಾರ ರಾತ್ರಿ ನಗರದ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ತೊಕ್ಕೊಟ್ಟು ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಅವರು ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ಬಾಂಧವರನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರ ಬುಧವಾರ ಝುಹರ್ ನಮಾಝ್ ಗೆ ಮೊದಲು ಕನ್ನಂಗಾರ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ
ಭೋಜ ಪೂಜಾರಿ