ಸ್ಟ್ಯಾನ್ಲಿ ಸುಧಾಕರ್
Update: 2024-05-26 13:14 GMT
ಉಡುಪಿ, ಮೇ 26: ಟೂರಿಸ್ಟ್ ಬಸ್ ಏಜೆಂಟಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಬಸ್ ಏಜೆಂಟ್, ಉಚ್ಚಿಲ ಸುಭಾಷ್‌ನಗರದ ನಿವಾಸಿ ಸ್ಟ್ಯಾನ್ಲಿ ಸುಧಾಕರ್ ಸಾಲಿನ್ಸ್(53) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಕಳೆದ ಐದು ದಿನಗಳ ಹಿಂದೆ ದಿಢೀರ್ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿ ಮಣಿಪಾಲ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಬಳಿಕ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಕಳೆದ 35 ವರ್ಷಗಳಿಂದ ಉಡುಪಿಯಲ್ಲಿ ಟೂರಿಸ್ಟ್ ಏಜೆಂಟಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಪತ್ನಿ ಹಾಗೂ ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.