ಕೆ.ಪಿ. ಬಿಂದುಸಾರ ಶೆಟ್ಟಿ
Update: 2024-05-26 17:25 GMT
ಮಂಗಳೂರು, ಮೇ 26: ಹಿರಿಯ ನ್ಯಾಯವಾದಿ, ಪತ್ರಕರ್ತ ಕದ್ರಿಕಂಬಳ ನಿವಾಸಿ ಕೆ.ಪಿ.ಬಿಂದುಸಾರ ಶೆಟ್ಟಿ (91) ಅಲ್ಪಕಾಲದ ಅಸೌಖ್ಯದಿಂದ ಕದ್ರಿಕಂಬಳದ ಸ್ವಗೃಹದಲ್ಲಿ ಮೇ 25ರಂದು ನಿಧನರಾದರು.
ಕೆ.ಪಿ.ಬಿಂದುಸಾರ ಶೆಟ್ಟಿ ಕಾಸರಗೋಡು ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದರು. ಮಹಿಳಾ ಸಭಾದ ಅಧ್ಯಕ್ಷೆ ಹಾಗೂ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ ಅವರನ್ನು ಅಗಲಿದ್ದಾರೆ.
ಅವರ ನಿಧನದ ಬಗ್ಗೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.