ವಾರ್ತಾಭಾರತಿಯ ಹಜರತ್ ನದಾಫ್‌ಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ʼಉದಯೋನ್ಮುಖ ಪತ್ರಕರ್ತʼ ಪ್ರಶಸ್ತಿ ಪ್ರಧಾನ

Update: 2024-07-29 15:14 GMT

ಧಾರವಾಡ : ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲ್ಪಡುವ ವಾರ್ಷಿಕ ‘ಉದಯೋನ್ಮುಖ ಪತ್ರಕರ್ತ’ ಪ್ರಶಸ್ತಿಯನ್ನು ‘ವಾರ್ತಾಭಾರತಿ’ಯ ಧಾರವಾಡ ಜಿಲ್ಲಾ ವರದಿಗಾರ ಹಜರತ್ ನದಾಫ್ ಅವರಿಗೆ ಸೋಮವಾರ ಪ್ರದಾನ ಮಾಡಲಾಯಿತು.

‘ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ಕೊಲೆ ಪ್ರಕರಣಗಳಿಗೆ ಡ್ರಗ್ಸ್ ನಂಟು’ ಎಂಬ ಅವರ ವರದಿಗೆ ʼಉದಯೋನ್ಮುಖ ಪತ್ರಕರ್ತ ಪ್ರಶಸ್ತಿʼ ಲಭಿಸಿದೆ.

ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯಿಷಾ ಖಾನಂ ಅವರು ಪ್ರಶಸ್ತಿಯನ್ನು ಪ್ರದಾನಿಸಿದರು.

ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಉಪಾಧಕ್ಷ ವಿಜಯ ಹೂಗಾರ, ಹಿರಿಯ ಪತ್ರಕರ್ತರಾದ ಶಿವಕುಮಾರ ಗೊಂಬಿ, ಮೆಹಬೂಬ ಮುನವಳ್ಳಿ, ಬಸವರಾಜ ಹೂಗಾರ, ಸಂಗಮೇಶ ಮೆಣಸಿನಕಾಯಿ, ಯಲ್ಲಪ್ಪ ಸೊಲಾರಗೊಪ್ಪ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News