ರಾಜಕೀಯ ಇಚ್ಛಾಶಕ್ತಿಗೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ : ಸಚಿವ ಸಂತೋಷ್ ಲಾಡ್

Update: 2024-02-18 12:49 GMT

ಹುಬ್ಬಳ್ಳಿ: ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಮಂದಿರ ನಿರ್ಮಿಸುವುದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್  ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಅದರೆ ಮಂದಿರವನ್ನು  ಶೇಕಡಾ 40ರಷ್ಟು ಮಾತ್ರ ಕಟ್ಟಿದ್ದಾರೆ . ರಾಮ ಮಂದಿರದ ಹೆಸರಿನಲ್ಲಿ ಯಾಕೆ ಮತ ಕೇಳುತ್ತೀರಿ? ಅಲ್ಲದೆ, ಕಳೆದ 10 ವರ್ಷದಲ್ಲಿ ಮೋದಿ ಸರಕಾರ ಏನು ಕೆಲಸ ಮಾಡಿದೆ? ಪೆಟ್ರೋಲ್​​, ಡೀಸೆಲ್, ಅಗತ್ಯ ವಸ್ತುಗಳ ದರ ಕಡಿಮೆ ಆಗಿದೆಯಾ? ಎಂದು ಪ್ರಶ್ನಿಸಿದರು.

ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ಇದೆ.  ದೇಶ ಹಳ್ಳ ಹಿಡಿದು ಹೋಗಿದೆ, ಹತ್ತು ವರ್ಷದಲ್ಲಿ ಬಡವರಿಗೆ ಅನಕೂಲ ಅಗಿರೋ ಒಂದು ಕಾರ್ಯಕ್ರಮ ಮಾಡಿಲ್ಲ ಎಂದು ಆರೋಪಿಸಿದರು.

ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವ ಪ್ರಭಾವಿಯಾಗಿದ್ದರೆ ಟಿವಿ ಆಫ್ ಮಾಡಿ ಬನ್ನಿ. ರಾಮ ರಹೀಮ್, ಪಾಕಿಸ್ತಾನ ಅಫ್ಘಾನಿಸ್ತಾನ ಹೆಸರು ಮೂಲಕ ಜನರನ್ನು ಹುಚ್ಚರನ್ನಾಗಿ ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತಾಡಿದರು. ಹಾಗಿದ್ದರೆ ಆರ್.ಡಿ.ಎಕ್ಸ್ ಹೇಗೆ ಬಂತು? ದೇಶದಲ್ಲಿ ಈ ತರಹ ಚರ್ಚೆಗಳೇ ಆಗುತ್ತಿಲ್ಲ ಎಂದರು.

ಬಿಜೆಪಿ ಏನೂ ಮಾಡಿಲ್ಲ. ಗ್ಯಾರಂಟಿಗಳನ್ನು ನೋಡಿ ಮತ ಹಾಕಿದರೆ ಬಿಜೆಪಿಯವರು ಗೆಲ್ಲಲ್ಲ. ಅಭಿವೃದ್ಧಿ ವಿಚಾರದ ಮೇಲೆ ಚುಣಾವಣೆಗೆ ಹೋದರೆ ಬಿಜೆಪಿ ಗೆಲ್ಲಲ್ಲ. ಜನರಿಗೆ ಮೋಸ ಮಾಡಿ ವೋಟ್ ತೆಗೆದುಕೊಳ್ಳುತ್ತಾರೆ. ಮುಂದಿನ 100 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News