ದಮಾಮ್: ಬೆಂಕಿ ಅವಘಡದಲ್ಲಿ ಮೂಡಬಿದಿರೆ ಮೂಲದ ಮಗು ಮೃತ್ಯು, ತಂದೆ, ತಾಯಿ, ಸಹೋದರನಿಗೆ ICUನಲ್ಲಿ ಚಿಕಿತ್ಸೆ

Update: 2024-05-26 16:07 IST
ದಮಾಮ್: ಬೆಂಕಿ ಅವಘಡದಲ್ಲಿ ಮೂಡಬಿದಿರೆ ಮೂಲದ ಮಗು ಮೃತ್ಯು, ತಂದೆ, ತಾಯಿ, ಸಹೋದರನಿಗೆ ICUನಲ್ಲಿ ಚಿಕಿತ್ಸೆ

ಸಾಂದರ್ಭಿಕ ಚಿತ್ರ 

  • whatsapp icon

ರಿಯಾದ್:‌ ಸೌದಿ ಅರೇಬಿಯಾದ ದಮಾಮ್ ನಲ್ಲಿ ನೆಲೆಸಿರುವ ಕರಾವಳಿ ಮೂಲದ ಅನಿವಾಸಿ ಭಾರತೀಯ ಕುಟುಂಬವೊಂದು ವಾಸಿಸುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮಗುವೊಂದು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಅದಮಾದ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಾಂಪೌಂಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೂಡಬಿದಿರೆಯ ಕೋಟೆಬಾಗಿಲು ಮೂಲದ ಶೇಖ್‌ ಫಹದ್‌ ಎಂಬವರ ಮಗು ಮೃತಪಟ್ಟಿದೆ.

ಫಹದ್‌ ಅವರ ಕುಟುಂಬವು ಕಳೆದ ಆರು ತಿಂಗಳಿನಿಂದ ಇಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಫಹದ್‌ ಅವರ ಪುತ್ರ ಸಾಯಿಕ್ ಶೇಖ್ ಮೃತಪಟ್ಟಿದ್ದು, ಫಹದ್‌, ಅವರ ಪತ್ನಿ ಸಲ್ಮಾ ಮತ್ತು ಇನ್ನೋರ್ವ ಪುತ್ರ ಶಾಹಿದ್‌ ಶೇಖ್‌ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. 

ಬೆಂಕಿ ಅವಘಡಕ್ಕೆ ಕಾರಣ ಏನೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News