ಉಜ್ಬೇಕಿಸ್ತಾನ್| ತುಂಬೆ ಗ್ರೂಪ್‍ನಿಂದ ತುಂಬೆ-ಫರ್ಗಾನಾ ವೈದ್ಯಕೀಯ ವಿಜ್ಞಾನ ಕಾಲೇಜು ಆರಂಭ

ಉಜ್ಬೇಕಿಸ್ತಾನ್: ಮಧ್ಯ ಏಷ್ಯಾದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಯುಎಇಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವೈವಿಧ್ಯಮಯ ಅಂತರರಾಷ್ಟ್ರೀಯ ವ್ಯಾಪಾರ ಸಮೂಹವಾದ ತುಂಬೆ ಗ್ರೂಪ್, ಫರ್ಗಾನಾ ಮೆಡಿಕಲ್ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (FMIPH) ಸಹಯೋಗದೊಂದಿಗೆ ತುಂಬೆ ಫರ್ಗಾನಾ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ (TFCOMS) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಈ ಯೋಜನೆಯ ಪಾಲುದಾರಿಕೆಯು ಎರಡೂ ಸಂಸ್ಥೆಗಳ ಆರ್ಥಿಕ ಸಹಕಾರ ಬಳಸಿಕೊಂಡು ವಿಶ್ವ ದರ್ಜೆಯ ವೈದ್ಯಕೀಯ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿರುವುದಾಗಿ ಪ್ರಕಟನೆ ತಿಳಿಸಿದೆ.
ತುಂಬೆ ಗ್ರೂಪ್‍ನ ಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್ ಅವರು ಈ ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು “FMIPH ನೊಂದಿಗೆ ನಮ್ಮ ಸಹಯೋಗವು ಜಾಗತಿಕವಾಗಿ ವೈದ್ಯಕೀಯ ಶಿಕ್ಷಣವನ್ನು ಮುನ್ನಡೆಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಇಂದಿನ ಆಧುನಿಕ ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ಭವಿಷ್ಯದ ಆರೋಗ್ಯ ವೃತ್ತಿಪರರನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಉನ್ನತ ಶಿಕ್ಷಣವನ್ನು TFCOMS ನೀಡಲಿದೆ ಎಂದು ತಿಳಿಸಿದ್ದಾರೆ.
TFCOMS ಮಹತ್ವಾಕಾಂಕ್ಷಿ ವೈದ್ಯಕೀಯ ವೃತ್ತಿಪರರನ್ನು ತರಬೇತುಗೊಳಿಸಲು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಶಿಕ್ಷಣ ಸಂಸ್ಥೆಯಾಗಲಿದೆ. ಪ್ರಮುಖ ಗ್ರಾಜುಯೇಟ್ ಎಂಟ್ರಿ ಡಾಕ್ಟರ್ ಆಫ್ ಮೆಡಿಸಿನ್ (MD) ಶಿಕ್ಷಣವು ಜಾಗತಿಕ ವೈದ್ಯಕೀಯ ಶಿಕ್ಷಣ ಮಾನದಂಡಗಳಿಗೆ ಅನುಗುಣವಾಗಿ ನಾಲ್ಕು ವರ್ಷಗಳ ಪಠ್ಯಕ್ರಮವಾಗಿದೆ. ಈ ಶಿಕ್ಷಣ ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳು, ಸಕ್ರಿಯ ಕಲಿಕಾ ವಿಧಾನಗಳು ಮತ್ತು ವೈವಿಧ್ಯಮಯ ಆರೋಗ್ಯ ರಕ್ಷಣಾ ವಿಷಯದಲ್ಲಿ ಕರಾರುವಕ್ಕಾದ ಕ್ಲಿನಿಕಲ್ ತರಬೇತಿಯನ್ನು ನೀಡಲಿದೆ.
ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ (GMU) ಮಾರ್ಗದರ್ಶನದಲ್ಲಿ ಗುಣಮಟ್ಟದ ಶಿಕ್ಷಣ ಕಾಯ್ದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಶಿಕ್ಷಣವನ್ನು ಪಡೆಯುವುದರಲ್ಲಿ ಸಂಶಯವಿಲ್ಲ.
TFCOMS ಯುಎಇಯ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ (GMU) ಶೈಕ್ಷಣಿಕ ಅಂಗಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ವೈದ್ಯಕೀಯ ಶಿಕ್ಷಣದ ಅತ್ಯುನ್ನತ ಗುಣಮಟ್ಟ ಕಾಯ್ದುಕೊಳ್ಳಲು ಸಾಕ್ಷಿಯಾಗಿದೆ.

ಪಠ್ಯಕ್ರಮವು GMUನ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಕಾರ್ಯಕ್ರಮಗಳೊಂದಿಗೆ ಜೋಡಿಸಿ ವಿನ್ಯಾಸಗೊಳಿಸ ಲಾಗಿದೆ. ಸುಧಾರಿತ ಬೋಧನಾ ವಿಧಾನಗಳು ಮತ್ತು ಕ್ಲಿನಿಕಲ್ ತರಬೇತಿಯನ್ನು ನೀಡಲಾಗುವುದು. ನಮ್ಮ ಸಂಸ್ಥೆಯ ಈ ಸಹಯೋಗವು ವಿದ್ಯಾರ್ಥಿಗಳಿಗೆ GMU ನ ಪರಿಣತಿ, ಸಂಶೋಧನಾ ಅವಕಾಶಗಳು ಮತ್ತು ಜಾಗತಿಕ ನೆಟ್‍ವರ್ಕ್‍ನಿಂದ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತದೆ. ಪದವೀಧರರು ವಿಶ್ವ ದರ್ಜೆಯ ಶಿಕ್ಷಣ ಮತ್ತು ವೃತ್ತಿ ಬೆಂಬಲ ಪಡೆಯುವ ಮೂಲಕ ಅವರನ್ನು ವಿಶ್ವದಾದ್ಯಂತ ಯಶಸ್ವಿ ವೈದ್ಯಕೀಯ ವೃತ್ತಿಜೀವನಕ್ಕೆ ಅಣಿಗೊಳಿಸಲಾಗುತ್ತದೆ.
FMIPHನ ರೆಕ್ಟರ್ ಪ್ರೊ. ಸಿಡಿಕೋವ್ ಅಕ್ಮಲ್ ಅಬ್ದಿಕಾಖರೋವಿಚ್ ಈ ಶಿಕ್ಷಣದ ಮಹತ್ವ ಕುರಿತು ತಿಳಿಸಿ, “ಈ ಪಾಲುದಾರಿಕೆಯು FMIPHನ ಶ್ರೀಮಂತ ಶೈಕ್ಷಣಿಕ ಪರಂಪರೆ ಮತ್ತು ತುಂಬೆ ಗ್ರೂಪ್‍ನ ಕೌಶಲ್ಯವನ್ನು ಒಟ್ಟುಗೂಡಿಸ ಲಿದೆ. ನಮ್ಮ ಸಂಯೋಜಿತ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಸಾಟಿಯಿಲ್ಲದ ಅವಕಾಶಗಳನ್ನು ಒದಗಿಸುತ್ತದೆ ಎಂದರು.
TFCOMS ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಸಮೂಹವನ್ನು ಆಕರ್ಷಿಸಲು ಸಜ್ಜಾಗಿದ್ದು, ಬಹುಸಂಸ್ಕೃತಿಯ ಕಲಿಕಾ ವಾತಾವರಣ ವಿದ್ಯಾರ್ಥಿಗಳಿಗೆ ವಿಶಿಷ್ಟ ಅನುಭವ ನೀಡಲಿದೆ. ನಮ್ಮ ಮೆಡಿಕಲ್ ಕಾಲೇಜು ಆಧುನಿಕ ಸೌಲಭ್ಯಗಳು, ಅನುಭವಿ ಅಧ್ಯಾಪಕರು ಮತ್ತು ಆರಂಭಿಕ ಕ್ಲಿನಿಕಲ್ ಮಾನ್ಯತೆ ಮತ್ತು ಸಿಮ್ಯುಲೇಶನ್ ತರಬೇತಿಗೆ ಒತ್ತು ನೀಡುವ ಪಠ್ಯಕ್ರಮವನ್ನು ಹೊಂದಿದೆ.
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ವಿವರಗಳನ್ನು ಅಧಿಕೃತ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದು: https://tfcoms.uz