ಸೌದಿ ಅರೇಬಿಯಾದಲ್ಲಿ ಶನಿವಾರದಿಂದ ರಮಝಾನ್ ಉಪವಾಸ ಪ್ರಾರಂಭ
Update: 2025-02-28 20:40 IST
PC : X
ಮೆಕ್ಕಾ : ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾಗಿದ್ದು, ನಾಳೆ ಮಾರ್ಚ್ 01, 2025ರ ಶನಿವಾರದಿಂದ ರಮಝಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾ ಸರಕಾರದ ಪ್ರಕಟನೆ ತಿಳಿಸಿದೆ.
ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಇಶಾ ನಮಾಝಿನ ನಂತರ ಸೌದಿ ಅರೇಬಿಯಾದ ಮಸೀದಿಗಳಲ್ಲಿ ತರಾವೀಹ್ ಪ್ರಾರ್ಥನೆಗಳು ಪ್ರಾರಂಭವಾಗಲಿದೆ.