ಭೂ ಕುಸಿತ: ಸಕಲೇಶಪುರ-ಬೇಲೂರು ರಾಜ್ಯ ಹೆದ್ದಾರಿ ಸಂಪರ್ಕ ಬಂದ್

Update: 2024-07-31 04:39 GMT

ಸಕಲೇಶಪುರ, ಜು.31: ಪಟ್ಟಣದ ಆಚಂಗಿ ರೈಲ್ವೆ ಸೇತುವೆ ಸಮೀಪ ಭೂ ಕುಸಿತ ಉಂಟಾಗಿರುವುದರಿಂದ ಸಕಲೇಶಪುರ ಹಾಗೂ ಬೇಲೂರು ನಡುವಿನ ರಾಜ್ಯ ಹೆದ್ದಾರಿ ಬಂದ್ ಆಗಿದೆ.

ಮಂಗಳವಾರ ಸುರಿದ ಭಾರೀ ಮಳೆಗೆ ಹೆದ್ದಾರಿ ಬದಿಯಲ್ಲಿ ಭೂಕುಸಿತ ಉಂಟಾಗಿದ್ದು, ಇದೀಗ ರಸ್ತೆಯ ಮಧ್ಯದಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಸಕಲೇಶಪುರ ಬೇಲೂರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.

ಬಾರೀ ವಾಹನಗಳು ಬೆಳಗೋಡು ಮಾರ್ಗವಾಗಿ ಬೇಲೂರು ಸಕಲೇಶಪುರ ನಡುವೆ ಸಂಚರಿಸಬೇಕಾಗಿದೆ. ಇನ್ನು ಲಘು ವಾಹನಗಳು ಹಲಸುಲಿಗೆ ರೈಲ್ವೆ ಗೇಟ್ ಒಸ್ಸೂರು ಹೋಟೆಲ್ ಮಾರ್ಗದಲ್ಲಿ ಸುತ್ತಿ ಬಳಸಿ ಸಂಚರಿಸುವಂತೆ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News