ಹಾವೇರಿ | ಎತ್ತಿನಗಾಡಿಗೆ ಬೈಕ್ ಢಿಕ್ಕಿ; ಮೂವರು ಯುವಕರು ಮೃತ್ಯು

Update: 2025-02-11 14:55 IST
ಹಾವೇರಿ | ಎತ್ತಿನಗಾಡಿಗೆ ಬೈಕ್ ಢಿಕ್ಕಿ; ಮೂವರು ಯುವಕರು ಮೃತ್ಯು
  • whatsapp icon

ಹಾವೇರಿ : ಎತ್ತಿನಗಾಡಿಗೆ ಬೈಕ್ ಢಿಕ್ಕಿಯಾಗಿ ಪರಿಣಾಮ ಬೈಕ್​ನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ನಡೆದಿದೆ.

ಮೃತ ಬೈಕ್‌ ಸವಾರರನ್ನು ಶಿಕುಮಾರ ಉಪ್ಪಾರ(25), ಆಕಾಶ ಬಿರಾದಾರ(23), ಮತ್ತು ದರ್ಶನ (23) ಗುರುತಿಸಲಾಗಿದೆ.

ಹನುಮನಮಟ್ಟಿ ಗ್ರಾಮದಿಂದ ಇಬ್ಬರು ವಿದ್ಯಾರ್ಥಿಗಳು ಸೇರಿ ಬೈಕ್​ನಲ್ಲಿ ಮೂವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಜಾತ್ರೆಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. 

ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News