ಹಾವೇರಿ | ದೇವಸ್ಥಾನದ ಕಳಸಾರೋಹಣದ ವೇಳೆ ಅವಘಡ : ಕ್ರೇನ್‌ನಿಂದ ಬಿದ್ದು ವ್ಯಕ್ತಿ ಮೃತ್ಯು

Update: 2025-02-07 15:59 IST
ಹಾವೇರಿ | ದೇವಸ್ಥಾನದ ಕಳಸಾರೋಹಣದ ವೇಳೆ ಅವಘಡ : ಕ್ರೇನ್‌ನಿಂದ ಬಿದ್ದು ವ್ಯಕ್ತಿ ಮೃತ್ಯು
  • whatsapp icon

ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕು ಶೇಷಗಿರಿ ಗ್ರಾಮದಲ್ಲಿನ ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಕ್ರೇನ್​ನ ಬಕೆಟ್ ಮುರಿದು ಕೆಳಗೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಾಯವಾಗಿದೆ. 

 ಮಂಜು ಪಾಟೀಲ್ (42)‌ ಮೃತರು ಎಂದು ತಿಳಿದು ಬಂದಿದೆ. ಮಂಜು ಬಡಿಗೇರ್ ಎಂಬವರು ಗಾಯಗೊಂಡಿದ್ದು, ಹಾನಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರೇನ್​ನ ಮೂಲಕ ಕಳಸ ಸ್ಥಾಪನೆ ಕಾರ್ಯ ನಡೆದಾಗ ಕ್ರೇನ್​ ಬಕೆಟ್​ ಮುರಿದು ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News