ಹಾವೇರಿ: ಮೈಕ್ರೋ ಪೈನಾನ್ಸ್ ಕಿರುಕುಳಕ್ಕೆ ಬೇಸತ್ತು ಕಿರಾಣಿ ಅಂಗಡಿ ಮಾಲಕ ಆತ್ಮಹತ್ಯೆ
Update: 2025-01-25 12:09 IST

ಹಾವೇರಿ: ಮೈಕ್ರೋ ಪೈನಾನ್ಸ್ ಕಿರುಕುಳಕ್ಕೆ ಬೇಸತ್ತು ಕಿರಾಣಿ ಅಂಗಡಿ ಮಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದೆ.
ನಾಗಪ್ಪ ಗುಂಜಾಳ (36) ವರ್ಷದ ಆತ್ಮಹತ್ಯೆಗೈದ ವ್ಯಕ್ತಿ.
ಕಿರಾಣಿ ಅಂಗಡಿ ನಡೆಸಲು ಬ್ಯಾಂಕ್ ಮತ್ತು ವಿವಿಧ ಮೈಕ್ರೋಪೈನಾನ್ಸ್ ನಿಂದ ಸುಮಾರು 15 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ತೀರಿಸಲಾಗದೇ ಮನನೊಂದು ಶುಕ್ರವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.