ಇಂಡೋನೇಶ್ಯಾ: ಶಾಲಾ ಬಸ್ ಅಪಘಾತ, 11 ಮಂದಿ ಸಾವು

Update: 2024-05-12 16:34 GMT

ಜಕಾರ್ತ : ಇಂಡೊನೇಶ್ಯಾದ ಜಾವಾ ದ್ವೀಪದಲ್ಲಿ ಶಾಲಾ ಬಸ್ಸೊಂದು ಕಾರು ಮತ್ತು ಬೈಕ್‍ಗೆ ಡಿಕ್ಕಿಯಾಗಿ ಕನಿಷ್ಟ 11 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಜಾವಾ ದ್ವೀಪದ ದೆಪೋಕ್‍ನಿಂದ ಲೆಂಬಾಂಗ್ ನಗರಕ್ಕೆ ಪ್ರಯಾಣಿಸುತ್ತಿದ್ದ ಬಸ್‍ನಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿದ್ದರು. ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಎಡಭಾಗಕ್ಕೆ ಚಲಿಸಿ ಕಾರು ಹಾಗೂ ಮೂರು ಬೈಕ್‍ಗಳಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ 9 ವಿದ್ಯಾರ್ಥಿಗಳ ಸಹಿತ 11 ಮಂದಿ ಸಾವನ್ನಪ್ಪಿದ್ದು 13 ಮಂದಿ ಗಂಭೀರ ಗಾಯಗೊಂಡಿದ್ದು 40 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.  

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News