ಲೆಬನಾನ್ ನ ಜನವಸತಿ ಪ್ರದೇಶದ ಮೇಲೆ ಇಸ್ರೇಲ್ ನಿಂದ ವೈಮಾನಿಕ ದಾಳಿ: ನಾಲ್ವರು ನಾಗರಿಕರು ಬಲಿ

Update: 2024-09-30 06:21 GMT

Photo: PTI

ಲೆಬನಾನ್: ಬೈರುತ್ ನಲ್ಲಿ ಸೋಮವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು Aljazeera ವರದಿ ಮಾಡಿದೆ.

ಹಿಜ್ಬುಲ್ಲಾ ಮತ್ತು ಲೆಬನಾನ್ ನಡುವೆ ಸಂಘರ್ಷ ಉಲ್ಬಣಗೊಂಡ ನಂತರ ಬೈರುತ್ ನ ಜನವಸತಿ ಪ್ರದೇಶದ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು ಇದೇ ಮೊದಲಾಗಿದೆ.

ಲೆಬನಾನ್ ನ ರಾಜಧಾನಿ ಬೈರುತ್ ನ ಕೋಲಾ ಪ್ರದೇಶದಲ್ಲಿ ಇಸ್ರೇಲ್ ಬಾಂಬ್ ದಾಳಿ ಮಾಡಿದೆ. ಲೆಬನಾನ್ ನ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ 105 ಜನರು ಬಲಿಯಾಗಿದ್ದಾರೆ. ಇಸ್ರೇಲ್ ಸೇನಾ ಜೆಟ್ಗಳು ಲೆಬನಾನ್ ದೇಶದಾದ್ಯಂತ ಬಾಂಬ್ ದಾಳಿಯನ್ನು ಮುಂದುವರಿಸಿವೆ.

ಲೆಬನಾನ್ ನ ಬೋರ್ಡರ್ ನಲ್ಲಿ ಇಸ್ರೇಲ್ ಮಿಲಿಟರಿ ಪಡೆಗಳು ಮಿಲಿಟರಿ ವಾಹನಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಬೀಡುಬಿಟ್ಟಿದೆ. ಇದರಿಂದಾಗಿ ಸಂಭಾವ್ಯ ಆಕ್ರಮಣಗಳ ಬಗ್ಗೆ ಭೀತಿ ಹೆಚ್ಚಿದೆ.

ಇದಲ್ಲದೆ, ಇಸ್ರೇಲ್ ಗಾಝಾ ಪಟ್ಟಿಯ ಮೇಲೂ ತನ್ನ ದಾಳಿಯನ್ನು ಮುಂದುವರಿಸಿದ್ದು, ಕಳೆದ 24 ಗಂಟೆಯಲ್ಲಿ 28 ಜನರನ್ನು ಹತ್ಯೆ ಮಾಡಿದೆ ಎಂದು Aljazeera ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News