ಅಮೆರಿಕ, ಬ್ರಿಟನ್‌ ನಲ್ಲಿ ಏರಿಂಡಿಯಾ ಕಾರ್ಯನಿರ್ವಹಣೆಗೆ ಪನ್ನೂನ್ ಬೆದರಿಕೆ

Update: 2024-11-26 22:46 IST
photo of Pannun

ಗುರುಪತ್ವಂತ್ ಸಿಂಗ್ ಪನ್ನೂನ್ | PC : PTI

  • whatsapp icon

ನ್ಯೂಯಾರ್ಕ್ : ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾದಲ್ಲಿ ಏರಿಂಡಿಯಾ ಕಾರ್ಯನಿರ್ವಹಣೆಯನ್ನು ಜನವರಿ 26ರ ಒಳಗೆ ಮುಚ್ಚುವಂತೆ ಖಾಲಿಸ್ತಾನ್ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ.

ಭಾರತೀಯ ಆರ್ಥಿಕತೆಯನ್ನು ಕೊಲ್ಲಲು ರಕ್ತರಹಿತ ಯುದ್ಧವನ್ನು ಪ್ರಾರಂಭಿಸಲು ಯೋಜಿಸಲಾಗಿದ್ದು ಅಮೆರಿಕನ್ನರು ಭಾರತೀಯ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು. ಅಮೆರಿಕದ ಕೈಗಾರಿಕೆಗಳನ್ನು ಬಲಪಡಿಸುವ ಏಕೈಕ ಮಾರ್ಗವೆಂದರೆ ಉದ್ಯೋಗಗಳನ್ನು ಸೃಷ್ಟಿಸುವುದು ಹಾಗೂ ಭಾರತೀಯ ಕೈಗಾರಿಕೆಗಳನ್ನು ತಡೆಯುವುದು ಮತ್ತು ನಿಷೇಧಿಸುವುದು. ಭಾರತದ ಆರ್ಥಿಕತೆಯನ್ನು ಕೊಲ್ಲಲು ರಕ್ತರಹಿತ ಯುದ್ಧವನ್ನು ನಾವು ಪ್ರಾರಂಭಿಸಲಿದ್ದೇವೆ' ಎಂದು ಖಾಲಿಸ್ತಾನ್ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್‍ನ ಮುಖ್ಯಸ್ಥ ಪನ್ನೂನ್ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News