ಇಟಲಿ ಪ್ರಧಾನಿಯ ಬಗ್ಗೆ ಗೇಲಿ ಮಾಡಿದ್ದ ಪತ್ರಕರ್ತೆಗೆ 4.5 ಲಕ್ಷ ರೂ. ದಂಡ

Update: 2024-07-19 15:52 GMT

ಜಾರ್ಜಿಯಾ ಮೆಲೋನಿ | NDTV 

ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ಎತ್ತರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಗೇಲಿ ಮಾಡಿದ್ದ ಪತ್ರಕರ್ತೆಗೆ ಮಿಲಾನ್ನ ನ್ಯಾಯಾಲಯ 5,465 ಡಾಲರ್( ಸುಮಾರು 4.5 ಲಕ್ಷ ರೂ.) ದಂಡ ವಿಧಿಸಿರುವುದಾಗಿ ಎಎನ್ಎಸ್ಎ ಸುದ್ದಿಸಂಸ್ಥೆ ವರದಿ ಮಾಡಿದೆ.

2021ರ ಅಕ್ಟೋಬರ್ನಲ್ಲಿ ಪತ್ರಕರ್ತೆ ಗಿಯುಲಿಯಾ ಕೊರ್ಟೆಸ್ ಟ್ವಿಟರ್ನಲ್ಲಿ (ಈಗ ಎಕ್ಸ್) ಮೆಲೋನಿಯ ಎತ್ತರದ ಬಗ್ಗೆ ತಮಾಷೆಯ ಹೇಳಿಕೆ ಪೋಸ್ಟ್ ಮಾಡಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಮೆಲೋನಿ ಹಾಗೂ ದಿವಂಗತ ಮುಖಂಡ ಬೆಂಟಿನೊ ಮುಸಲೋನಿಯ ಫೋಟೋವನ್ನು ಪೋಸ್ಟ್ ಮಾಡಿದ್ದರು ಕೊರ್ಟೆಸ್. ` ನೀವು, ನನ್ನನ್ನು ದಿಟ್ಟಿಸಿ ನೋಡಲಾಗದು ಮೆಲೋನಿ, ಅಷ್ಟಕ್ಕೂ ನೀವು ಹೆಚ್ಚೆಂದರೆ 4 ಅಡಿ ಎತ್ತರವಿರಬಹುದು' ಎಂದು ಮುಸಲೋನಿ ಹೇಳುವಂತೆ ಟ್ವೀಟ್ ಮಾಡಲಾಗಿತ್ತು. ಇದು `ಬಾಡಿಶೇಮಿಂಗ್' ಪ್ರಕರಣ ಎಂದು ಮೆಲೋನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿರುವ ಕೊರ್ಟೆಸ್ ` ಇಟಲಿ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಸ್ವಾತಂತ್ರ್ಯದ ಬಗ್ಗೆ ಗಂಭೀರ ಸಮಸ್ಯೆಯನ್ನು ಹೊಂದಿದೆ. ಇಟಲಿಯಲ್ಲಿ ಸ್ವತಂತ್ರ ಪತ್ರಕರ್ತರಿಗೆ ಇದು ಕಠಿಣ ಸಮಯವಾಗಿದೆ. ಮುಂದೆ ಉತ್ತಮ ದಿನಗಳಿಗಾಗಿ ಆಶಿಸೋಣ. ನಾವು ಬಿಟ್ಟುಕೊಡುವುದಿಲ್ಲ' ಎಂದು `ಎಕ್ಸ್' ಮಾಡಿದ್ದಾರೆ. ನ್ಯಾಯಾಲಯದ ಆದೇಶದ ವಿರುದ್ಧ ಕೋರ್ಟೆಸ್ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News