ಅಫ್ಘಾನ್: 10 ವರ್ಷ ಮೇಲ್ಪಟ್ಟ ಹುಡುಗಿಯರು ಶಾಲೆಗೆ ಹೋಗುವುದಕ್ಕೆ ನಿಷೇಧ; ವರದಿ

Update: 2023-08-06 16:53 GMT

ಸಾಂದರ್ಭಿಕ ಚಿತ್ರ | Photo: PTI

ಕಾಬೂಲ್: ಅಫ್ಘಾನ್ನಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಕೆಲವು ಪ್ರಾಂತಗಳಲ್ಲಿ 10 ವರ್ಷ ಮೇಲ್ಪಟ್ಟ ಹುಡುಗಿಯರು ಶಾಲೆಗೆ ಹೋಗುವುದನ್ನು ನಿಷೇಧಿಸಿದೆ ಎಂದು `ಬಿಬಿಸಿ ಪರ್ಶಿಯನ್' ವರದಿ ಮಾಡಿದೆ.

ಶಾಲೆಗಳಿಗೆ ಹಾಗೂ ಕಿರು ಅವಧಿಯ ತರಬೇತಿ ಕಾರ್ಯಕ್ರಮಗಳಲ್ಲಿ 10 ವರ್ಷ ಮೇಲ್ಪಟ್ಟ ಹುಡುಗಿಯರು ಭಾಗವಹಿಸಲು ಅವಕಾಶವಿಲ್ಲ ಎಂದು ಘಜ್ನಿ ಪ್ರಾಂತದಲ್ಲಿನ ಶಾಲೆಗಳ ಮುಖ್ಯಸ್ಥರಿಗೆ ಅಫ್ಘಾನ್ ಶಿಕ್ಷಣಾ ಇಲಾಖೆ ಸುತ್ತೋಲೆ ರವಾನಿಸಿದೆ. ಇತರ ಕೆಲವು ಪ್ರಾಂತಗಳಲ್ಲಿ `3ನೇ ತರಗತಿಗಿಂತ ಮೇಲ್ಪಟ್ಟ ತರಗತಿಗಳಲ್ಲಿ ಅಧ್ಯಯನ ನಡೆಸುತ್ತಿರುವ ಹುಡುಗಿಯರನ್ನು ಮನೆಗೆ ಕಳುಹಿಸುವಂತೆ' ಇಲಾಖೆ ಸೂಚಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News