ಕಝಕಿಸ್ತಾನ: 60ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Update: 2024-12-25 09:04 GMT
ಕಝಕಿಸ್ತಾನ: ಬಾಕುವಿನಿಂದ ಗ್ರೋಜ್ನಿಗೆ ತೆರಳುತ್ತಿದ್ದ 60 ಕ್ಕೂ ಅಧಿಕ ಪ್ರಯಾಣಿಕರಿದ್ದ ʼಅಜೆರ್ಬೈಜಾನಿ ಏರ್ ಲೈನ್ಸ್ʼ ಗೆ ಸೇರಿದ ವಿಮಾನವು ಕಝಕಿಸ್ತಾನದ ಅಕ್ಟೌದಲ್ಲಿ ಪತನಗೊಂಡಿದೆ.
ಕಝಾಕಿಸ್ತಾನ ಅಕ್ಟೌ ಸಿಟಿ ಬಳಿ ವಿಮಾನ ಪತನಗೊಂಡಿದ್ದು, ಘಟನೆಯ ದೃಶ್ಯ ಕೂಡ ವೈರಲ್ ಆಗಿದೆ.
ಕಝಾಕಿಸ್ತಾನದ ಅಕ್ಟೌ ನಗರದ ಬಳಿ ಪ್ರಯಾಣಿಕ ವಿಮಾನವೊಂದು ಪತನಗೊಂಡ ನಂತರ ಸಾವುನೋವುಗಳು ಸಂಭವಿಸಿರುವ ಭಯವಿದೆ ಎಂದು ಕಝಕಿಸ್ತಾನದ ಸಚಿವಾಲಯದ ಹೇಳಿಕೆ ಉಲ್ಲೇಖಿಸಿ ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ.