ಶಸ್ತ್ರಾಸ್ತ್ರಗಳ ಸದ್ದಡಗಿಸಲು ಜಾಗತಿಕ ಸಂಕಲ್ಪ | ಕ್ರಿಸ್‍ಮಸ್ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಆಗ್ರಹ
Update: 2024-12-25 15:58 GMT
ವ್ಯಾಟಿಕನ್ : ವಿಭಜನೆಗಳನ್ನು ಕೊನೆಗೊಳಿಸುವಂತೆ ಮತ್ತು ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಲ್ಲಿಸುವಂತೆ ಪೋಪ್ ಫ್ರಾನ್ಸಿಸ್ ಆಗ್ರಹಿಸಿದ್ದಾರೆ.
ಕ್ರಿಸ್‍ಮಸ್ ಸಂದರ್ಭ ವ್ಯಾಟಿಕನ್ ನಗರದ ಸೈಂಟ್ ಪೀಟರ್ಸ್ ಬ್ಯಾಸಿಲಿಕಾದ ಮುಖ್ಯ ಬಾಲ್ಕನಿಯಲ್ಲಿ `ನಗರಕ್ಕೆ ಮತ್ತು ಜಗತ್ತಿಗೆ' ನೀಡಿದ ಸಂದೇಶದಲ್ಲಿ `ನಮ್ಮ ಶತ್ರುಗಳೊಂದಿಗೆ ಕೂಡಾ ವಿಶಾಲವಾದ ಸಮನ್ವಯಕ್ಕೆ' ಕರೆ ನೀಡಿದರು. ಭರವಸೆಯ ಯಾತ್ರಿಕರಾಗಲು, ಶಸ್ತ್ರಾಸ್ತ್ರಗಳ ಶಬ್ದಗಳನ್ನು ನಿಶ್ಯಬ್ದಗೊಳಿಸಲು ಮತ್ತು ವಿಭಜನೆಗಳನ್ನು ಜಯಿಸಲು, ಮಧ್ಯಪ್ರಾಚ್ಯದಿಂದ ಉಕ್ರೇನ್‍ವರೆಗೆ, ಆಫ್ರಿಕಾದಿಂದ ಏಶ್ಯಾದವರೆಗೆ, ಎಲ್ಲಾ ರಾಷ್ಟ್ರಗಳ ಜನರೂ ದೃಢ ಸಂಕಲ್ಪ ಮಾಡಬೇಕು. ವಿಶೇಷವಾಗಿ ಮಾನವೀಯ ಪರಿಸ್ಥಿತಿಯು ಅತ್ಯಂತ ಗಂಭೀರವಾಗಿರುವ ಗಾಝಾ, ಲೆಬನಾನ್ ಮತ್ತು ಸಿರಿಯಾದಲ್ಲಿ ಹೊಸ ವರ್ಷದಿಂದ ದ್ವೇಷ ಮತ್ತು ಸೇಡಿನ ಮನೋಭಾವ ಕಡಿಮೆಯಾಗಲಿ' ಎಂದು ಪೋಪ್ ಹಾರೈಸಿದರು.