ಹೊಸ ಗ್ರೀನ್‍ಕಾರ್ಡ್ ಅರ್ಜಿ ಪ್ರಕ್ರಿಯೆ ಘೋಷಿಸಿದ ಅಮೆರಿಕ

Update: 2023-10-27 18:06 GMT

Photo- PTI

ವಾಷಿಂಗ್ಟನ್: ಗ್ರೀನ್‍ಕಾರ್ಡ್ ಅರ್ಜಿ ಪ್ರಕ್ರಿಯೆಯ ಹೊಸ ಉಪಕ್ರಮವನ್ನು ಅಮೆರಿಕ ಶ್ವೇತಭವನದ ಸಮಿತಿ ಘೋಷಿಸಿದ್ದು ಇದರಿಂದ ವಿದೇಶಿ ವೃತ್ತಿಪರರಿಗೆ, ವಿಶೇಷವಾಗಿ ಭಾರತೀಯರಿಗೆ ಪ್ರಯೋಜನವಾಗಲಿದೆ ಎಂದು ಮೂಲಗಳು ಹೇಳಿವೆ.

ಅರ್ಜಿ ಪ್ರಕ್ರಿಯೆ ವ್ಯವಸ್ಥೆಯ ಪ್ರಾಥಮಿಕ ಹಂತದಲ್ಲಿ ಉದ್ಯೋಗದ ಅಧಿಕೃತ ಕಾರ್ಡ್ ಮತ್ತು ಇತರ ಅಗತ್ಯದ ಪ್ರಯಾಣ ದಾಖಲೆಗಳನ್ನು ನೀಡಲು ಸಮಿತಿ ಶಿಫಾರಸು ಮಾಡಿದೆ. ಈ ಘೋಷಣೆ ಜಾರಿಗೊಂಡರೆ 8 ದಶಲಕ್ಷಕ್ಕೂ ಅಧಿಕ ಅರ್ಜಿದಾರರಿಗೆ(ಬಹುತೇಕ ಭಾರತೀಯರು) ಲಾಭವಾಗಲಿದೆ. ಇದು 5 ವರ್ಷಕ್ಕೂ ಅಧಿಕ ವರ್ಷಗಳಿಂದ ಬಾಕಿಯುಳಿದಿರುವ ಅರ್ಜಿಗಳಿಗೆ ಮತ್ತು 2018ರಲ್ಲಿ ಸಲ್ಲಿಸಿದ ಅರ್ಜಿಗಳನ್ನೂ ಒಳಗೊಳ್ಳಲಿದೆ.

ಇದೀಗ ಈ ಪ್ರಸ್ತಾವನೆಯನ್ನು ಅಧ್ಯಕ್ಷ ಜೋ ಬೈಡನ್ ಅವರ ಅನುಮೋದನೆಗೆ ರವಾನಿಸಲಾಗುತ್ತದೆ. ಅಧ್ಯಕ್ಷರ ಅನುಮೋದನೆ ದೊರೆತರೆ ಸುಮಾರು 18 ತಿಂಗಳ ಬಳಿಕ ಜಾರಿಯಾಗಬಹುದು ಎಂದು ಸಮಿತಿಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News