ಅಮೆರಿಕ : ಸ್ಪೀಕರ್ ಹುದ್ದೆಯ ಆಕಾಂಕ್ಷಿ ಜೋರ್ಡನ್‍ಗೆ ಹಿನ್ನಡೆ

America: The aspirant for the post of Speaker, Jordan, suffered a setback

Update: 2023-10-19 17:42 GMT

ಸಾಂದರ್ಭಿಕ ಚಿತ್ರ | Photo: NDTV

ವಾಶಿಂಗ್ಟನ್: ಅಮೆರಿಕ ಸಂಸತ್‍ನ ಕೆಳಮನೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‍ನ ಸ್ಪೀಕರ್ ಹುದ್ದೆಗೆ ತೀವ್ರ ಸಂಪ್ರದಾಯವಾದಿ ಜಿಮ್ ಜೋರ್ಡನ್‍ರ ಉಮೇದುವಾರಿಕೆಯನ್ನು ಅಮೆರಿಕ ಸಂಸದರು ಮತ್ತೆ ತಿರಸ್ಕರಿಸಿದ್ದಾರೆ.

ಅಕ್ಟೋಬರ್ 3ರಂದು ಕೆವಿನ್ ಮೆಕಾರ್ಥಿಯನ್ನು ಸ್ಪೀಕರ್ ಹುದ್ದೆಯಿಂದ ಉಚ್ಛಾಟಿಸಿದ ದಿನದಿಂದ ಹುದ್ದೆ ತೆರವಾಗಿದೆ. ಬುಧವಾರ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಜೋರ್ಡನ್ ಅವರ 22 ಸಹೋದ್ಯೋಗಿಗಳು ವಿರುದ್ಧವಾಗಿ ಮತ ಚಲಾಯಿಸಿದರು. ಮಂಗಳವಾರ ಮೊದಲ ಸುತ್ತಿನ ಮತದಾನದಲ್ಲಿ ಜೋರ್ಡನ್ ವಿರುದ್ಧ 20 ಸಹೋದ್ಯೋಗಿಗಳು ಮತ ಚಲಾಯಿಸಿದ್ದರು.

ಸದನದ ಸ್ಪೀಕರ್ ಹುದ್ದೆ ಖಾಲಿ ಇರುವುದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ. ಸದನ ಕಾರ್ಯ ನಿರ್ವಹಿಸಬೇಕಿದ್ದರೆ ರಿಪಕಬ್ಲಿಕನರ ಅಭ್ಯರ್ಥಿಯ ಪರ ಮತ ಚಲಾಯಿಸುವ ಅಗತ್ಯವಿದೆ ಎಂದು ಜೋರ್ಡನ್ ಅವರನ್ನು ಬೆಂಬಲಿಸಿದ್ದ ಕ್ಯಾಲಿಫೋರ್ನಿಯಾದ ರಿಪಬ್ಲಿಕನ್ ಸಂಸದ ಡೇವಿಡ್ ವಲಾದೊ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News