ಅಪಘಾತ ಪತ್ತೆ ಹಚ್ಚಿ, ತುರ್ತು ಸೇವೆಗೆ ಸ್ವಯಂಚಾಲಿತ ಕರೆ ಮಾಡಿದ ಆ್ಯಪಲ್ ವಾಚ್
Update: 2024-12-04 11:45 GMT
ವಾಷಿಂಗ್ಟನ್: ಭಾರತೀಯ ಮೂಲದ ಉದ್ಯಮಿಯೊಬ್ಬರ ಕಾರು ಅಮೆರಿಕಾದಲ್ಲಿ ಅಪಘಾತಕ್ಕೀಡಾಗಿದ್ದು, ಉದ್ಯಮಿ ಕಟ್ಟಿಕೊಂಡಿದ್ದ ಆ್ಯಪಲ್ ವಾಚ್ ಅಪಘಾತವನ್ನು ಪತ್ತೆ ಹಚ್ಚಿ 911 ಗೆ ತುರ್ತು ಕರೆಯನ್ನು ಮಾಡಿ, ಮಾಹಿತಿಯನ್ನು ನೀಡಿದೆ. ಈ ಬಗ್ಗೆ ಉದ್ಯಮಿ ಕುಲದೀಪ್ ಧನ್ಕರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಪಘಾತವಾದ ಕಾರ್ ಚಿತ್ರದೊಂದಿಗೆ ಟ್ವೀಟ್ ಮಾಡಿದ ಧನಕರ್, ನಿನ್ನೆ ಟ್ರಾಫಿಕ್ ನಲ್ಲಿ ಬಾಕಿಯಾಗಿದ್ದಾಗ ನಮ್ಮ ಕಾರ್ ಗೆ ಹಿಂಬದಿಯಿಂದ ಅಪಘಾತವಾಗಿದೆ. ತಕ್ಷಣವೇ ಆ್ಯಪಲ್ ವಾಚ್ ಅಪಘಾತವನ್ನು ಪತ್ತೆ ಹಚ್ಚಿ, ತುರ್ತು ಸೇವೆಗೆ ಸ್ವಯಂ ಚಾಲಿತವಾಗಿ ಕರೆ ಮಾಡಿದೆ. ಕೆಲವೇ ನಿಮಿಷಗಳಲ್ಲಿ ಅಧಿಕಾರಿಯೊಬ್ಬರು ಘಟನಾ ಸ್ಥಳದಲ್ಲಿದ್ದರು. 30 ನಿಮಿಷಗಳೊಳಗೆ ನಾವು ಅಲ್ಲಿಂದ ನಮ್ಮ ಗಮ್ಯಕ್ಕೆ ತೆರಳಿದೆವು, ನಾವೆಲ್ಲಾ ಸುರಕ್ಷಿತರಾಗಿದ್ದೇವೆ. ಆ್ಯಪಲ್ ವಾಚ್ ಮತ್ತು ಕ್ಯಾಲಿಫೋರ್ನಿಯಾ ಹೈವೇ ಪಾಟ್ರೋಲ್ ಗೆ ಧನ್ಯವಾದ ಎಂದು ಅವರು ಬರೆದಿದ್ದಾರೆ.