ಚಾಡ್ ಮಿಲಿಟರಿ ನೆಲೆಗೆ ದಾಳಿ : 40 ಯೋಧರ ಮೃತ್ಯು
Update: 2024-10-28 16:46 GMT
ಸಾಂದರ್ಭಿಕ ಚಿತ್ರ
ದಕಾರ್ : ಮಧ್ಯ ಆಫ್ರಿಕಾದ ಚಾಡ್ ದೇಶದ ಲೇಕ್ ಪ್ರಾಂತದಲ್ಲಿ ಮಿಲಿಟರಿ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಸುಮಾರು 40 ಯೋಧರು ಸಾವನ್ನಪ್ಪಿರುವುದಾಗಿ ಅಧ್ಯಕ್ಷರ ವಕ್ತಾರರು ಸೋಮವಾರ ಹೇಳಿದ್ದಾರೆ.
ದಾಳಿಕೋರರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಲು ಅಧ್ಯಕ್ಷ ಮಹಮತ್ ಇದ್ರಿಸ್ ಡೆಬಿ ಆದೇಶಿಸಿದ್ದಾರೆ. ಯಾವುದೇ ಗುಂಪು ದಾಳಿಯ ಹೊಣೆ ವಹಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.