ಉತ್ತರ ಗಾಝಾದಲ್ಲಿ ಅಸಹನೀಯ ಪರಿಸ್ಥಿತಿ : ವಿಶ್ವಸಂಸ್ಥೆ ಕಳವಳ

Update: 2024-10-28 17:02 GMT

PC : PTI

ವಿಶ್ವಸಂಸ್ಥೆ : ಉತ್ತರ ಗಾಝಾದಲ್ಲಿರುವ ಫೆಲೆಸ್ತೀನ್ ಪ್ರಜೆಗಳ ಅವಸ್ಥೆ ಅಸಹನೀಯವಾಗಿದೆ. ಗಾಝಾದಲ್ಲಿ ಸಂಘರ್ಷವನ್ನು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಅಂಶಗಳಿಗೆ ಕಿಂಚಿತ್ತೂ ಗಮನ ನೀಡದೆ ಮುಂದುವರಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

` ಉತ್ತರ ಗಾಝಾದಲ್ಲಿ ಸಾವು-ನೋವು, ನಾಶ-ನಷ್ಟದ ಭೀಕರತೆಯು ಆಘಾತಕಾರಿಯಾಗಿದೆ. ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ನಾಗರಿಕರು ಸಿಲುಕಿದ್ದಾರೆ. ಅಸ್ವಸ್ಥರು ಮತ್ತು ಗಾಯಾಳುಗಳಿಗೆ ಜೀವ ಉಳಿಸುವ ಆರೋಗ್ಯ ರಕ್ಷಣೆ ಅಲಭ್ಯವಾಗಿದೆ. ಕುಟುಂಬಗಳಿಗೆ ಆಹಾರ, ಆಶ್ರಯದ ಕೊರತೆ ಎದುರಾಗಿದೆ. ಹಲವು ಕುಟುಂಬಗಳು ಪ್ರತ್ಯೇಕಗೊಂಡಿವೆ ಮತ್ತಯ ಹಲವರನ್ನು ಬಂಧಿಸಲಾಗಿದೆ' ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ.

ಉತ್ತರ ಗಾಝಾಕ್ಕೆ ಆಹಾರ, ಔಷಧ ಹಾಗೂ ಇತರ ಮಾನವೀಯ ನೆರವನ್ನು ಒದಗಿಸುವ ಪ್ರಯತ್ನಗಳಿಗೆ ಇಸ್ರೇಲ್ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಉತ್ತರ ಗಾಝಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯಿಂದ ಆಗಿರುವ ವಿನಾಶವು ಅಲ್ಲಿನ ಬದುಕನ್ನು ಅಸಹನೀಯಗೊಳಿಸಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News