ಪಾಕಿಸ್ತಾನ | ಉಗ್ರರ ದಾಳಿಯಲ್ಲಿ 16 ಯೋಧರ ಸಾವು ; ಐದು ಮಂದಿಗೆ ಗಾಯ
Update: 2024-12-21 17:48 GMT
ಇಸ್ಲಾಮಾಬಾದ್ : ಅಫ್ಘಾನ್ ಗಡಿಭಾಗದ ಬಳಿ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಸೇನಾ ಠಾಣೆಯ ಮೇಲೆ ಸೋಮವಾರ ತಡರಾತ್ರಿ ನಡೆದ ಉಗ್ರರ ದಾಳಿಯಲ್ಲಿ 16 ಯೋಧರು ಸಾವನ್ನಪ್ಪಿದ್ದು ಇತರ 5 ಯೋಧರು ತೀವ್ರ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಖೈಬರ್ ಪಖ್ತೂಂಕ್ವಾ ಪ್ರಾಂತದ ಮಕೀನ್ ಪ್ರದೇಶದಲ್ಲಿ 30ಕ್ಕೂ ಅಧಿಕ ಉಗ್ರರು ಸೇನಾ ಠಾಣೆಯ ಮೇಲೆ ಆಕ್ರಮಣ ನಡೆಸಿದ್ದು ವಯರ್ಲೆಸ್ ಸಂವಹನ ಸಾಧನಗಳು, ದಾಖಲೆ ಪತ್ರಗಳು ಹಾಗೂ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದ್ದಾರೆ. ದಾಳಿಯಲ್ಲಿ 16 ಯೋಧರು ಸಾವನ್ನಪ್ಪಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನಿ ತಾಲಿಬಾನ್ ದಾಳಿಯ ಹೊಣೆ ವಹಿಸಿಕೊಂಡಿದ್ದು ಸಂಘಟನೆಯ ಉನ್ನತ ಕಮಾಂಡರ್ ಗಳನ್ನು ಸೇನಾಪಡೆ ಹತ್ಯೆ ಮಾಡಿರುವುದಕ್ಕೆ ಪ್ರತೀಕಾರ ಕ್ರಮ ಇದಾಗಿದೆ ಎಂದು ಹೇಳಿದೆ.