ಕ್ರೊಯೇಷಿಯಾ | ಶಾಲೆಯಲ್ಲಿ ಚೂರಿಯಿಂದ ದಾಳಿ; ಬಾಲಕಿ ಮೃತ್ಯು

Update: 2024-12-20 16:27 GMT

ಸಾಂದರ್ಭಿಕ ಚಿತ್ರ

 ಜಾಗ್ರೆಬ್ : ಕ್ರೊಯೇಷಿಯಾ ರಾಜಧಾನಿ ಜಾಗ್ರೆಬ್‍/ನ ಶಾಲೆಯೊಂದರಲ್ಲಿ ನಡೆದ ಚೂರಿ ದಾಳಿಯಲ್ಲಿ 7 ವರ್ಷದ ಬಾಲಕಿ ಮೃತಪಟ್ಟಿದ್ದು ಶಿಕ್ಷಕ ಹಾಗೂ ಇತರ ಐವರು ಮಕ್ಕಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಜಾಗ್ರೆಬ್‍ ನ ಪಕ್ಕದ ನಗರದಲ್ಲಿರುವ ಪ್ರೆಕೊ ಎಲಿಮೆಂಟರಿ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 9:50ಕ್ಕೆ ಘಟನೆ ನಡೆದಿದೆ. 19 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಸಚಿವೆ ಐರಿನಾ ಹ್ರಿಸ್ಟಿಕ್‍ ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಆರೋಪಿ ಶಾಲೆಯ ಆವರಣದಲ್ಲಿ ಒಬ್ಬ ಯುವಕನ ಮೇಲೆ ಹಲ್ಲೆ ನಡೆಸಿದ ಬಳಿಕ ತರಗತಿಗಳಿಗೆ ನುಗ್ಗಿ ಎದುರಿಗೆ ಸಿಕ್ಕವರಿಗೆ ಚೂರಿಯಿಂದ ತಿವಿದಿದ್ದಾನೆ. ಒಬ್ಬ ಬಾಲಕಿ ಮೃತಪಟ್ಟಿದ್ದು ಶಿಕ್ಷಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತರ ಐದು ಮಕ್ಕಳಿಗೂ ಗಾಯಗಳಾಗಿವೆ.

ಹಲ್ಲೆ ನಡೆಸಿದ ಬಳಿಕ ಪಕ್ಕದಲ್ಲಿದ್ದ ಕೊಠಡಿಗೆ ತೆರಳಿದ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದರೆ ಪೊಲೀಸರು ಆತ್ಮಹತ್ಯೆ ಪ್ರಯತ್ನ ವಿಫಲಗೊಳಿಸಿ ಆರೋಪಿ ಯುವಕನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News