ಎಚ್-1ಬಿ ವೀಸಾ ಅರ್ಜಿ ಪ್ರಕ್ರಿಯೆಗೆ ಹೊಸ ನಿಯಮ ಘೋಷಿಸಿದ ಅಮೆರಿಕ

Update: 2024-12-19 17:14 GMT

ಸಾಂದರ್ಭಿಕ ಚಿತ್ರ | PC : thewire.in

ವಾಷಿಂಗ್ಟನ್: ಅಮೆರಿಕಕ್ಕೆ ಭೇಟಿ ನೀಡಲು ಬಯಸುವ ಭಾರತೀಯರಿಗೆ ಪ್ರಯೋಜನವಾಗುವ ಕ್ರಮವೊಂದರಲ್ಲಿ 2025ರ ಜನವರಿ 1ರಿಂದ ವಲಸೆಯೇತರ ವೀಸಾ ಅರ್ಜಿದಾರರಿಗೆ ಅಮೆರಿಕ ಹೊಸ ನಿಯಮವನ್ನು ಜಾರಿಗೊಳಿಸಿದೆ.

ವೀಸಾ ಅರ್ಜಿಯ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಮೆರಿಕ ಬುಧವಾರ ಹೊಸ ಕಾನೂನುಗಳನ್ನು ಘೋಷಿಸಿದ್ದು ಕಡಿಮೆ ಕಾಯುವ ಸಮಯ ಮತ್ತು ವೀಸಾ ಸಂದರ್ಶನ ನೇಮಕಾತಿಗಾಗಿ ಎಲ್ಲರಿಗೂ ನ್ಯಾಯಯುತ ಅವಕಾಶದ ಭರವಸೆಯನ್ನು ನೀಡುತ್ತದೆ. ವೀಸಾ ಸಂದರ್ಶನದ ನೇಮಕಾತಿಯನ್ನು ಪಡೆಯುವಲ್ಲಿ ಪ್ರತಿಯೊಬ್ಬರಿಗೂ ನ್ಯಾಯಯುತ ಅವಕಾಶವಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮತ್ತು ಕಾಯುವಿಕೆಯನ್ನು ಕಡಿಮೆ ಮಾಡಲು ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದೇವೆ' ಎಂದು ಅಮೆರಿಕದ ರಾಯಭಾರಿ ಕಚೇರಿ ಪೋಸ್ಟ್ ಮಾಡಿದೆ. ಈ ಕ್ರಮವು ಭಾರತದ ಸಾವಿರಾರು ಟೆಕ್ಕಿಗಳಿಗೆ ಪ್ರಯೋಜನವಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News