ಗಾಝಾ | ಇಸ್ರೇಲ್ ದಾಳಿಯಲ್ಲಿ 16 ಮಂದಿ ಮೃತ್ಯು
Update: 2024-12-18 18:15 GMT
ಗಾಝಾ : ಗಾಝಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕ, ಈಜಿಪ್ಟ್ ಖತರ್ ಅಧಿಕಾರಿಗಳು ಪ್ರಯತ್ನ ದುವರಿಸುತ್ತಿರುವಂತೆಯೇ ಮಂಗಳವಾರ ತಡರಾತ್ರಿ ಗಾಝಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಉತ್ತರ ಗಾಝಾದ ಬೀಟ್ ಲಾಹಿಯಾದಲ್ಲಿ ಮಂಗಳವಾರ ತಡರಾತ್ರಿ ಮನೆಯೊಂದನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಗಾಝಾ ನಗರ, ಮಧ್ಯ ಗಾಝಾದ ನುಸೀರಾತ್ ಶಿಬಿರ, ಈಜಿಪ್ಟ್ ಗಡಿಯ ಸನಿಹದಲ್ಲಿರುವ ರಫಾದಲ್ಲಿ ನಡೆದ ಪ್ರತ್ಯೇಕ ವೈಮಾನಿಕ ದಾಳಿಯಲ್ಲಿ 6 ಮಂದಿ ಮೃತಪಟ್ಟಿರುವುದಾಗಿ ಗಾಝಾದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.