ಮೊಝಾಂಬಿಕ್ | ಚಂಡಮಾರುತದ ಅಬ್ಬರಕ್ಕೆ ಕನಿಷ್ಠ 34 ಮಂದಿ ಬಲಿ
Update: 2024-12-18 17:57 GMT
ಮಪುಟೊ : ಮೊಝಾಂಬಿಕ್ ನಾದ್ಯಂತ ಅಪ್ಪಳಿಸಿದ ಚಂಡಮಾರುತದ ಅಬ್ಬರಕ್ಕೆ ಕನಿಷ್ಠ 34 ಮಂದಿ ಬಲಿಯಾಗಿರುವುದಾಗಿ ರಾಷ್ಟ್ರೀಯ ಅಪಾಯ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ.
ಗಂಟೆಗೆ ಸುಮಾರು 260 ಕಿ.ಮೀ ವೇಗದಲ್ಲಿ ಅಪ್ಪಳಿಸಿದ ಚಂಡಮಾರುತದಿಂದ ಕ್ಯಾಬೊ ಡೆಲಗಾಡೊ ಪ್ರಾಂತದಲ್ಲಿ 28 ಮಂದಿ, ನಂಪುಲಾ ಪ್ರಾಂತದಲ್ಲಿ 3, ನಿಯಾಸ್ಸ ಪ್ರಾಂತದಲ್ಲಿ 3 ಮಂದಿ ಸಾವನ್ನಪ್ಪಿದ್ದು ಇತರ 319 ಮಂದಿ ಗಾಯಗೊಂಡಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 250 ಮಿ.ಮೀ.ನಷ್ಟು ದಾಖಲೆ ಮಳೆಯಾಗಿದೆ. 23,600ಕ್ಕೂ ಅಧಿಕ ಮನೆಗಳು ಮತ್ತು 170 ಮೀನುಗಾರಿಕಾ ದೋಣಿಗಳು ನಾಶಗೊಂಡಿವೆ. 1,75,000 ಜನರು ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.