ಜಸ್ಟಿನ್ ಟ್ರುಡೊ ಸರಕಾರಕ್ಕೆ ಆಘಾತ : ಕೆನಡ ವಿತ್ತ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ

Update: 2024-12-17 18:14 GMT

ಜಸ್ಟಿನ್ ಟ್ರುಡೊ | PC : PTI

ಟೊರೊಂಟೊ,ಡಿ.17: ಕೆನಡದ ವಿತ್ತ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಸೋಮವಾರ ರಾ ಜೀನಾಮೆ ನೀಡಿದ್ದಾರೆ. ಅತ್ಯಂತ ಪ್ರಭಾವಿ ಹಾಗೂ ನಿಷ್ಠಾವಂ ಸಚಿವರಲ್ಲೊಬ್ಬರೆಂದು ಗುರುತಿಸಲ್ಪಟ್ಟಿದ್ದ ಕ್ರಿಸ್ಟಿಯಾ ಅವರ ರಾಜೀನಾಮೆಯಿಂದಾಗಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ರಾಜಕೀಯ ಜೀವನದ ಅತಿ ದೊಡ್ಡ ಸತ್ವ ಪರೀಕ್ಷೆಯನ್ನು ಎದುರಿಸಬೇಕಾಗಿ ಬಂದಿದೆ.

ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಫ್ರೀಲ್ಯಾಂಡ್ ಅವರು, ಇನ್ನು ಮುಂದೆ ವಿತ್ತ ಸಚಿವೆಯಾಗಿ ಮಂದುವರಿಯುವುದನ್ನು ಬಯಸುವುದಿಲ್ಲವೆಂದು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತನಗೆ ತಿಳಿಸಿದ್ದಾರೆ ಹಾಗೂ ಸಂಪುಟದಲ್ಲಿ ಬೇರೊಂದುಖಾತೆಯ ಕೊಡುಗೆಯನ್ನು ಅವರು ನೀಡಿದ್ದರು. ಆದರೆ ಸಂಪುಟದಿಂದ ನಿರ್ಗಮಿಸುವುದೇ ಅತ್ಯಂತ ಪ್ರಾಮಾಣಿಕ ಹಾಗೂ ಯೋಗ್ಯವಾದ ದಾರಿಯಾಗಿದೆ ಎಂದು ತಾನು ರಾಜೀನಾಮೆ ಪತ್ರದಲ್ಲಿ ತಿಳಿಸಿರುವುದಾಗಿ ಹೇಳಿದರು.

ಕೆನಡ ಪ್ರಜೆಗಳಿಗೆ 250 ಕೆನಡಿಯನ್ ಡಾಲರ್ ಚೆಕ್‌ಗಳನ್ನು ನೀಡುವ ಹಾಗೂ ಎರಡು ತಿಂಗಳ ಮಾರಾಟ ತೆರಿಗೆಯಲ್ಲಿ ವಿನಾಯಿತಿ ನೀಡುವ ಇತ್ತೀಚೆಗೆ ಟ್ರುಡೋ ಸರಕಾರ ಘೋಷಿಸಿದ್ದ ಯೋಜನೆಯನ್ನು ಫ್ರೀಲ್ಯಾಂಡ್ ವಿರೋಧಿಸಿದ್ದರು. ಕೆನಡದ ಉತ್ಪನ್ನಗಳಿಗೆ ಶೇ.25ರಷ್ಟು ತೆರಿಗೆಯನ್ನು ವಿಧಿಸುವ ಟ್ರಂಪ್ ಬೆದರಿಕೆಯ ನಡುವೆ, ಜನಮರುಳು ಕಾರ್ಯಕ್ರಮಗಳನ್ನು ಜಾರಿಯನ್ನು ದೇಶವು ಸಹಿಸಿಕೊಳ್ಳಲು ಸಾಧ್ಯವಾಗದೆಂದು ಅವರು ಹೇಳಿದರು.

ಫ್ರೀಲ್ಯಾಂಡ್ ರಾ ಜೀ ನಾಮೆಯಿಂದ ತೆರವಾದ ಸ್ಥಾನಕ್ಕೆ ಟ್ರುಡೊ ಅವರು ತನ್ನ ದೀರ್ಘಕಾಲದ ಮಿತ್ರನಾದ ಡೊಮಿನಿಕ್ ಲೆಬ್ಲಾಂಕ್ ಅವರನ್ನು ನೇಮಿಸಿದ್ದಾರೆ. ಪ್ರಸಕ್ತ ಅವರು ಟ್ರುಡೋ ಸಂಪುಟದಲ್ಲಿ ಡೊಮಿನಿಕ್ ಅವರು ಸಾರ್ವಜನಿಕ ಸುರಕ್ಷಾ ಸಚಿವರಾಗಿದ್ದಾರೆ.

ಪ್ರಮಾಣವಚನ ಸಮಾರಂಭದ ಬಳಿಕ ಲೆಬ್ಲಾಂಕ್ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ತಾನು ಹಾಗೂ ಟ್ರುಡೋ ಅವರು ಕೆನಡಿಯನ್ ಪ್ರಜೆಗಳು ಎದುರಿಸುತ್ತಿರುವ ಜೀವನನಿರ್ವಹಣಾ ವೆಚ್ಚದ ಏರಿಕೆಯನ್ನು ನಿಯಂತ್ರಿಸಲು ಹಾಗೂ ಗಡಿಭದ್ರತೆ ಹಾಗೂ ಆರ್ಥಿ ಕ ವಿಷಯಗಳಿಗೆ ಸಂಬಂಧಿಸಿ ಟ್ರಂಪ್ ಜೊತೆ ಸಮಾನಮನಸ್ಕತೆಯನ್ನು ಸಾಧಿಸಲು ಶ್ರಮಿಸುವುದಾಗಿ ಹೇಳಿದರು.

ಆನಂತರ ಪಕ್ಷದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಟ್ರುಡೋ ಅವರು, ಕ್ರಿಸ್ಟಿಯಾ ರಾಜೀನಾಮೆಯಿಂದಾಗಿ ತನ್ನ ಪಕ್ಷವು ಅತ್ಯಂತ ಕಠಿಣ ದಿನಗಳನ್ನು ಎದುರಿಸುತ್ತಿದೆ ಎಂದರು. ಆದರೆ ತನ್ನ ಮುಂದಿನ ಯೋಜನೆ ಏನೆಂಬುದನ್ನು ವಿವರಿಸಲು ಅವರು ನಿರಾಕರಿಸಿದರು.

ಪ್ರತಿಪಕ್ಷ ನ್ಯೂಡೆಮಾಕ್ರಾಟಿಕ್ ಪಾರ್ಟಿಯ ನಾಯಕ ಜಗಮೀತ್ ಸಿಂಗ್ ಅವರು ಹೇಳಿಕೆಯೊಂದನ್ನು ನೀಡಿ, ಆಡಳಿತಾರೂಢ ಲಿಬರಲ್ ಪಕ್ಷದ ನಾಯಕರು ಅಧಿಕಾರಕ್ಕೆ ಅಂಟಿಕೊಳ್ಳಲು ಬಯಸಿದ್ದಾರೆಂದು ಟೀಕಿಸಿದರು ಮತ್ತು ಟ್ರುಡೋ ಸರಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News