ವಿಯೆಟ್ನಾಮ್ | ಬೆಂಕಿ ದುರಂತದಲ್ಲಿ 11 ಮಂದಿ ಮೃತ್ಯು, 7 ಮಂದಿಗೆ ಗಾಯ

Update: 2024-12-20 16:11 GMT

ಸಾಂದರ್ಭಿಕ ಚಿತ್ರ

ಹನೋಯಿ : ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ಹೋಟೆಲ್ ಒಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು ಇತರ 7 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಹೋಟೆಲ್ ಮಾಲಕರ ಜತೆ ಜಗಳವಾಡಿದ್ದ ಸ್ಥಳೀಯ ವ್ಯಕ್ತಿ ಬಳಿಕ ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವುದು ಬೆಂಕಿ ದುರಂತಕ್ಕೆ ಕಾರಣ. ಜನಪ್ರಿಯ ಪ್ರವಾಸಿ ತಾಣದಲ್ಲಿರುವ ಈ ಹೋಟೆಲ್ ಸದಾ ಪ್ರವಾಸಿಗರಿಂದ ತುಂಬಿರುತ್ತದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ 51 ವರ್ಷದ ಶಂಕಿತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News