ಮಾನವೀಯ ನೆರವು ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ | ಇಸ್ರೇಲ್ ಸಂಸ್ಥೆಯ ಮೇಲೆ ಅಮೆರಿಕ ನಿರ್ಬಂಧ
Update: 2024-06-15 15:29 GMT
ವಾಷಿಂಗ್ಟನ್ : ಗಾಝಾದ ಜನರಿಗೆ ಪೂರೈಸಲು ಮಾನವೀಯ ನೆರವು ಸಾಗಿಸುತ್ತಿದ್ದ ವಾಹನಗಳ ಸಾಲಿನ ಮೇಲೆ ದಾಳಿ ನಡೆಸಿದ ಇಸ್ರೇಲ್‍ನ `ತ್ಸಾವ್ 9' ಎಂಬ ಸಂಸ್ಥೆಯ ಮೇಲೆ ನಿರ್ಬಂಧ ಜಾರಿಗೊಳಿಸಿರುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ.
ಇಸ್ರೇಲ್ ಸೇನೆಯ ಮೀಸಲು ಯೋಧರು ಹಾಗೂ ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿನ ಇಸ್ರೇಲ್ ಸಮುದಾಯದ ಜತೆ ಸಂಪರ್ಕವಿರುವ ತ್ಸಾವ್ 9 ಸಂಸ್ಥೆಯ ಕಾರ್ಯಕರ್ತರು ನೆರವು ಸಾಗಿಸುತ್ತಿದ್ದ ಟ್ರಕ್‍ಗಳನ್ನು ತಡೆದು ಹಾನಿಗೊಳಿಸಿದ್ದಾರೆ. ಇದು ಶಾಂತಿ ಪ್ರಕ್ರಿಯೆಗೆ ಸಮಸ್ಯೆ ತಂದಿರುವುದರಿಂದ ನಿರ್ಬಂಧ ಜಾರಿಗೊಳಿಸಿರುವುದಾಗಿ ಅಮೆರಿಕ ಹೇಳಿದೆ.