ಬಾಂಗ್ಲಾ | ಇಸ್ಕಾನ್‍ನ ಇಬ್ಬರು ಸದಸ್ಯರ ಬಂಧನ
Update: 2024-12-01 16:00 GMT
ಢಾಕ : ರವಿವಾರ ಬಾಂಗ್ಲಾದೇಶದಲ್ಲಿ ಇಸ್ಕಾನ್‍ನ ಮತ್ತಿಬ್ಬರು ಸನ್ಯಾಸಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದ್ದು ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಾತರಿಪಡಿಸುವಂತೆ ಬಾಂಗ್ಲಾ ಸರಕಾರವನ್ನು ಭಾರತ ಆಗ್ರಹಿಸಿದೆ.
ಕಳೆದ ಸೋಮವಾರ ಢಾಕಾದಲ್ಲಿ ಬಂಧಿಸಲ್ಪಟ್ಟಿದ್ದ ಇಸ್ಕಾನ್ ಸದಸ್ಯ ಚಿನ್ಮಯ್ ಕೃಷ್ಣದಾಸ್ ಅವರನ್ನು ಚಿತ್ತಗಾಂಗ್ ಜೈಲಿನಲ್ಲಿ ಭೇಟಿಯಾಗಿ ಅವರಿಗೆ ಆಹಾರ ಒದಗಿಸಲು ತೆರಳಿದ್ದ ರುದ್ರಪ್ರೋತಿ ಕೇಷವ್ ದಾಸ್ ಮತ್ತು ರಂಗನಾಥ್ ಶ್ಯಾಮಸುಂದರ ದಾಸ್ ರನ್ನು ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
ಬಾಂಗ್ಲಾ ಅಧಿಕಾರಿಗಳ ಕ್ರಮವನ್ನು ಇಸ್ಕಾನ್ ಕೋಲ್ಕತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಮಣ ದಾಸ್ ಪ್ರಶ್ನಿಸಿದ್ದು ಇದನ್ನು ಖಂಡಿಸಿ ಮತ್ತು ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆಗಾಗಿ 150ಕ್ಕೂ ಅಧಿಕ ದೇಶಗಳಲ್ಲಿರುವ ಇಸ್ಕಾನ್ ಭಕ್ತರು ಸಭೆ ಸೇರಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದಿದ್ದಾರೆ.