ಚೀನಾ ಸಂಸ್ಥೆಯಿಂದ ಹಣ ಸ್ವೀಕಾರ ಒಪ್ಪಿಕೊಂಡ ಬೈಡನ್ ಪುತ್ರ

Update: 2023-07-28 18:08 GMT

ಹಂಟರ್ ಬೈಡನ್ | Photo: PTI

ವಾಷಿಂಗ್ಟನ್: ಚೀನಾ ಕಮ್ಯುನಿಸ್ಟ್ ಪಾರ್ಟಿ(ಸಿಸಿಪಿ) ಬೆಂಬಲಿತ ಸಂಸ್ಥೆಯಿಂದ 6,64,000 ಡಾಲರ್ ಹಣವನ್ನು ಪಡೆದಿರುವುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುತ್ರ ಹಂಟರ್ ಬೈಡನ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತನ್ನ ಪುತ್ರನ ಸಂಸ್ಥೆಗೆ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಸಂಸ್ಥೆ ಹಣ ನೀಡಿಲ್ಲ ಎಂಬ ಜೋ ಬೈಡನ್ ಹೇಳಿಕೆಗೂ ಅವರ ಪುತ್ರನ ಹೇಳಿಕೆಗೂ ಸಾಮ್ಯತೆಯಿಲ್ಲ ಎಂದು ವರದಿ ಹೇಳಿದೆ. ಡೆಲಾವೆರ್‍ನ ನ್ಯಾಯಾಲಯದ ಎದುರು ಇದೇ ಮೊದಲ ಬಾರಿ ಹಾಜರಾದ ಹಂಟರ್ ಬೈಡನ್ `ತಾನು 2017ರಲ್ಲಿ ಹಡ್ಸನ್ ವೆಸ್ಟ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು ಸಂಸ್ಥೆಯ ಪಾಲುದಾರ ಚೀನಾದ ಸಿಇಎಫ್‍ಸಿ ಇಂಧನ ಸಂಸ್ಥೆಯ ಜತೆ ಸಂಪರ್ಕದಲ್ಲಿದ್ದ. ಆ ಸಂಸ್ಥೆಯು ನನ್ನ ಸಂಸ್ಥೆಯಲ್ಲಿ 6,64,000 ಡಾಲರ್ ಹಣವನ್ನು ಹೂಡಿಕೆ ಮಾಡಿದೆ' ಎಂದು ಹೇಳಿಕೆ ನೀಡಿದರು.

ಹಂಟರ್ ಬೈಡನ್ ಚೀನಾ ಸರಕಾರಕ್ಕೆ ಸಂಬಂಧಿಸಿದ ಸಂಸ್ಥೆಯಿಂದ ಅಕ್ರಮವಾಗಿ 6 ಲಕ್ಷ ಡಾಲರ್‍ಗೂ ಅಧಿಕ ಹಣ ಪಡೆದಿದ್ದಾರೆ ಎಂದು ಫೆಡರಲ್ ಕೋರ್ಟ್‍ನಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News