ಕೆನಡಾ: ವಿಮಾನ ಅಪಘಾತ 6 ಮಂದಿ ಸಾವು

Update: 2024-01-24 15:52 GMT

Photo:NDTV

ಟೊರಂಟೊ : ಕೆನಡಾದ ಉತ್ತರದಲ್ಲಿ ಗ್ರಾಮೀಣ ಭಾಗದಲ್ಲಿರುವ ಗಣಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಮಂಗಳವಾರ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಕನಿಷ್ಟ 6 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ವಾಯವ್ಯ ಅರ್ಕಾನ್ಸಾಸ್ ಪ್ರಾಂತದ ಫೋರ್ಟ್ ಸ್ಮಿತ್ ನಗರದ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8:50ಕ್ಕೆ ಟೇಕಾಫ್ ಆಗಿದ್ದ ಅವಳಿ ಇಂಜಿನ್ ನ ಲಘು ವಿಮಾನ ನಿಲ್ದಾಣದಿಂದ 1.1 ಕಿ.ಮೀ ದೂರದಲ್ಲಿ ಪತನಗೊಂಡಿದೆ. ಗ್ರಾಮೀಣ ಪ್ರದೇಶದ ಗಣಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ಪತನಗೊಳ್ಳಲು ಕಾರಣ ತಿಳಿದುಬಂದಿಲ್ಲ. ಅಪಘಾತದಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು ಓರ್ವ ಬದುಕುಳಿದಿದ್ದಾನೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಬಳಿಕ ಫೋರ್ಟ್ ಸ್ಮಿತ್ ನಿಲ್ದಾಣದಿಂದ ಹೊರಡುವ ಎಲ್ಲಾ ವಿಮಾನಗಳ ಪ್ರಯಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆನಡಾದ ಸಾರಿಗೆ ಸುರಕ್ಷತಾ ಬೋರ್ಡ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News