ಕೆನಡಾ: ಥಿಯೇಟರಿನತ್ತ ಗುಂಡಿನ ದಾಳಿ

Update: 2024-02-01 16:15 GMT

ಸಾಂದರ್ಭಿಕ ಚಿತ್ರ | Photo: NDTV 

 

ಒಟ್ಟಾವ : ಕೆನಡಾದಲ್ಲಿ ಮಲಯಾಳಂ ಸಿನೆಮಾ ಪ್ರದರ್ಶಿಸುತ್ತಿದ್ದ ಮಲ್ಟಿಪ್ಲೆಕ್ಸ್ ಗಳ ಮೇಲೆ ಗುರುತಿಸಲಾಗದ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಸಿನೆಮಾ ಪ್ರದರ್ಶನ ರದ್ದುಗೊಳಿಸಲಾಗಿದೆ.

ಗ್ರೇಟರ್ ಟೊರಂಟೊ ಪ್ರದೇಶದ ರಿಚ್ಮಂಡ್ ಹಿಲ್ ಮತ್ತು ವಾಗನ್ ನಗರಗಳಲ್ಲಿ ಮಲಯಾಳಂ ಸಿನೆಮಾ `ಮಲೈಕೊಟ್ಟೈ ವಾಲಿಬನ್' ಸಿನೆಮಾ ಪ್ರದರ್ಶನ ಸಂದರ್ಭ ವಾಹನದಲ್ಲಿ ಆಗಮಿಸಿದ ವ್ಯಕ್ತಿಗಳು ಥಿಯೇಟರಿನತ್ತ ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಮೀರಿದ್ದರಿಂದ ಸಿನೆಮಾ ಪ್ರದರ್ಶನ ರದ್ದುಗೊಳಿಸಲಾಗಿದೆ ಎಂದು ಕೆನಡಾದಲ್ಲಿ ಸರಣಿ ಮಲ್ಟಿಪ್ಲೆಕ್ಸ್ ಗಳನ್ನು ಹೊಂದಿರುವ `ಸಿನೆಪ್ಲೆಕ್ಸ್'ನ ವಕ್ತಾರರನ್ನು ಉಲ್ಲೇಖಿಸಿ `ಕೆನಡಿಯನ್ ಪ್ರೆಸ್' ವರದಿ ಮಾಡಿದೆ.

ಪೀಲ್ ನಗರ, ಟೊರಂಟೊಗಳಲ್ಲೂ ಕಳೆದ ವಾರಾಂತ್ಯ ಇದೇ ರೀತಿಯ ಘಟನೆ ನಡೆದಿದ್ದು ಸಿನೆಮಾ ಥಿಯೇಟರ್ ಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಗುಂಡಿನ ದಾಳಿ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕೆನಡಾ ಪೊಲೀಸರನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News