ಎಐ ಆಧಾರಿತ ಮೊಬೈಲ್ ಆ್ಯಪ್‌ ಗೆ ಚಾಲನೆ ನೀಡಿದ ಚೀನಾ

Update: 2024-09-06 18:02 GMT

Photo : freepik

ಬೀಜಿಂಗ್ : ಚೀನಾದ ಅಗ್ರಗಣ್ಯ ಇ-ಕಾಮರ್ಸ್ ಸಂಸ್ಥೆ ಆಲಿಬಾಬ ಇದೀಗ `ಜೀವನ ಸಹಾಯಕ' ಎಂಬ ಎಐ(ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮೊಬೈಲ್ ಆ್ಯಪ್‌ ಗೆ ಚಾಲನೆ ನೀಡಿದ್ದು ಇದರ ಮೂಲಕ ಆಹಾರ ವಸ್ತುಗಳಿಗೆ ಆರ್ಡರ್ ಮಾಡುವುದು, ಟ್ಯಾಕ್ಸಿಗಳನ್ನು ಬುಕ್ ಮಾಡಬಹುದು ಎಂದು ಮೂಲಗಳು ಹೇಳಿವೆ.

ಈ ಆ್ಯಪ್ ಮೂಲಕ ಊಟವನ್ನು ಆರ್ಡರ್ ಮಾಡಬಹುದು, ಟ್ಯಾಕ್ಸಿಗಳನ್ನು, ಟಿಕೆಟ್‌ ಗಳನ್ನು ಬುಕ್ ಮಾಡಬಹುದು, ಸ್ಥಳೀಯ ಮನರಂಜನಾ ಆಯ್ಕೆಗಳನ್ನು ಅನ್ವೇಷಿಸಬಹುದು. ಜತೆಗೆ ಡಿಜಿಟಲ್ ಪಾವತಿಯ ಆ್ಯಪ್ `ಆಲಿಪೇ'ಯ ಸೇವೆಗಳನ್ನು ಬಳಸಬಹುದು. ಎಐಯ ಸಾಮರ್ಥ್ಯ ವನ್ನು ಬಳಸಿಕೊಂಡು ಬಳಕೆದಾರರ ಅನುಕೂಲಗಳನ್ನು ಸುಧಾರಿಸಲು ಆಲಿಪೇ ಬದ್ಧವಾಗಿದೆ. ಎಐ ಆಧಾರಿತ ವ್ಯವಸ್ಥೆ ಪ್ರತಿಯೊಬ್ಬರ ದೈನಂದಿನ ಬದುಕಿನಲ್ಲಿ ಅಮೂಲ್ಯವಾದ ಸಾಧನಗಳಾಗಿ ಮಾರ್ಪಟ್ಟಿವೆ ಎಂದು ಆಲಿಬಾಬಾ ಸಂಸ್ಥೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News