ಅಮೆರಿಕದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

Update: 2023-08-13 18:11 GMT

ಸಾಂದರ್ಭಿಕ ಚಿತ್ರ.| Photo: PTI

ವಾಷಿಂಗ್ಟನ್: ಬೇಸಿಗೆಯ ಝಳ ಹೆಚ್ಚುತ್ತಿರುವಂತೆಯೇ ಅಮೆರಿಕದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳೂ ಹೆಚ್ಚುತ್ತಿದ್ದು ಸೋಂಕಿನ ಪ್ರಕರಣ ದಿಢೀರನೆ ಉಲ್ಬಣಗೊಳ್ಳಲು ಹೊಸ ರೂಪಾಂತರ ಇಜಿ.5 ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಮೈಕ್ರಾನ್ ಅನ್ನು ಹೋಲುವ, ಆದರೆ ಸುಲಭವಾಗಿ ಪ್ರತಿರಕ್ಷೆ(ಇಮ್ಯುನಿಟಿ)ಯಿಂದ ತಪ್ಪಿಸಿಕೊಳ್ಳುವ ಇಜಿ.5 ರೂಪಾಂತರ ಕ್ಷಿಪ್ರವಾಗಿ ಹರಡುವ ಸಾಮಥ್ರ್ಯ ಹೊಂದಿದೆ. ನ್ಯೂಯಾರ್ಕ್ನಲ್ಲಿ ಹೊಸ ಸೋಂಕಿನ ಪ್ರಕರಣ ದಿಢೀರನೆ ಹೆಚ್ಚಿದ್ದು ಲಸಿಕೆ ಪಡೆದಿರುವ ಅಥವಾ ಈ ಹಿಂದೊಮ್ಮೆ ಸೋಂಕು ದೃಢಪಟ್ಟವರು ಸ್ವಲ್ಪ ಮಟ್ಟಿನ ರಕ್ಷಣೆ ಹೊಂದಿರುತ್ತಾರೆ. ಆದರೂ ಅವರು ಜಾಗರೂಕರಾಗಿರಬೇಕು ಮತ್ತು ಸೋಂಕಿತರ ಸಂಪರ್ಕದಿಂದ ದೂರವಿರಬೇಕು ಎಂದು ಆರೋಗ್ಯತಜ್ಞರು ಎಚ್ಚರಿಸಿದ್ದಾರೆ. ನ್ಯೂಯಾರ್ಕ್ ನಲ್ಲಿ ಕಳೆದ ಸೋಮವಾರದಿಂದ 594 ಮಂದಿ ಕೋವಿಡ್ ಸೋಂಕಿತರಾಗಿದ್ದು ಇದರಲ್ಲಿ ಬಹುತೇಕ ಪ್ರಕರಣಗಳು ಬ್ರಾಂಕ್ಸ್ ಮತ್ತು ಕ್ವೀನ್ಸ್ ನಗರಗಳಲ್ಲಿ ವರದಿಯಾಗಿದೆ ಎಂದು ನ್ಯೂಯಾರ್ಕ್ನ ಆರೋಗ್ಯ ಇಲಾಖೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News